ಕಡೆಗೂ ಅರಸಾಳಿನಲ್ಲಿ ರೈಲ್ವೆ ಪ್ರಯಾಣಕ್ಕೆ ಕೂಡಿಬಂದ ಮುಹೂರ್ತ

0 38


ರಿಪ್ಪನ್‌ಪೇಟೆ: ಪ್ಲಾಟ್ ಫಾರಂ ಇಲ್ಲ ಎಂಬ ಒಂದೇ ಕಾರಣದಿಂದಾಗಿ ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲು ಅರಸಾಳು ನಿಲ್ದಾಣದಲ್ಲಿ ನಿಲ್ಲದೆ ಓಡಾಡುತ್ತಿದ್ದು ಈ ಬಗ್ಗೆ ‘ಮಲ್ನಾಡ್ ಟೈಮ್ಸ್’ ಸಾಕಷ್ಟು ಬಾರಿ ‘ಮಲೆನಾಡಿನ ಪ್ರಯಾಣಿಕರಿಗಿಲ್ಲ ರೈಲು ಹತ್ತಿ ಇಳಿಯವ ಭಾಗ್ಯ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸಮಗ್ರ ವರದಿಯಿಂದಾಗಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಕಡೆಗೂ ಕಣ್ಣು ತೆರೆಯುವ ಮೂಲಕ ರೈಲ್ವೆ ಪ್ರಯಾಣಕ್ಕೆ ನಾಳೆಯಿಂದ ಮುಹೂರ್ತ ನೀಡಿ ಪ್ರಯಾಣಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ಮತ್ತು ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ, ಅರಸಾಳು ಗ್ರಾಮಸ್ಥರು ಸಾಕಹಷ್ಠು ಬಾರಿ ಪ್ರತಿಭಟನೆ ನಡೆಸಿದರು ಹಾಗೂ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಸಹ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತೀಚೆಗೆ ‘ಮಲ್ನಾಡ್ ಟೈಮ್ಸ್’ ಸಹ “ನಿಲ್ಲದ ರೈಲು ಮಲೆನಾಡ ಪ್ರಯಾಣಿಕರಿಗಿಲ್ಲ ಹತ್ತಿ ಇಳಿಯುವ ಭಾಗ್ಯ’’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸಮಗ್ರ ವರದಿಯನ್ನಾದರಿಸಿ ಸಂಸದ ಬಿ.ವೈ.ರಾಘವೇಂದ್ರ ಅರಸಾಳು ಮಾಲ್ಗುಡಿ ಮ್ಯೂಸಿಯಂ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲು ನಿಲುಗಡೆಗೆ ಆದೇಶಿಸುವ ಮೂಲಕ ಈ ಭಾಗದ ಪ್ರಯಾಣಿಕರಿಗೆ ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ ಓಡಾಡಲು ಅವಕಾಶ ಕಲ್ಪಿಸಿರುವುದಕ್ಕೆ ಆಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

Leave A Reply

Your email address will not be published.

error: Content is protected !!