ತಮ್ಮನ್ನು ಆತ್ಮ ಎಂದು ತಿಳಿದು ಪರಮಾತ್ಮನ ನೆನಪು ಮಾಡುವುದೇ ರಾಜಯೋಗ ಧ್ಯಾನ ; ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ

0 342

ಹೊಸನಗರ : ಆತ್ಮದ ತಂದೆಯಾದ ಪರಮಾತ್ಮನಿಂದ ಶಾಂತಿ ಶಕ್ತಿ ಜ್ಞಾನ ಆನಂದ ಇತ್ಯಾದಿ ಗುಣಗಳ ಆಸ್ತಿ ಸರ್ವಶಕ್ತಿಗಳ ಆಸ್ತಿ ಜ್ಞಾನದ ಆಸ್ತಿ ಲಭ್ಯವಾಗಲಿದೆ. ತಮ್ಮನ್ನು ಆತ್ಮ ಎಂದು ತಿಳಿದು ಪರಮಾತ್ಮನ ನೆನಪು ಮಾಡುವುದೇ ರಾಜಯೋಗ ವಿಶ್ವದ ಏಕೈಕ ಪರಮಾತ್ಮನೇ ಸರ್ವಧರ್ಮದ ಆತ್ಮರಿಗೂ ತಂದೆಯಾಗಿದ್ದಾನೆ ಸರ್ವದೇವಾತ್ಮರು ಧರ್ಮತ್ಮರು ಮಹಾತ್ಮರು ಆ ಪರಮಾತ್ಮನನ್ನ ಧ್ಯಾನಿಸುತ್ತಾರೆ ಎಲ್ಲಾ ವರ್ಗ ವರ್ಣದವರಿಗೂ ಏಕೈಕ ದೇವರೇ ಪರಮಾತ್ಮ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾನಿಲಯದ ಗದಗದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸಿದರು.

ಅವರು ಇಂದು ಹೊಸನಗರದ ಈಶ್ವರಿಯ ವಿಶ್ವವಿದ್ಯಾನಿಲಯದ ಶಾಖೆಯಲ್ಲಿ ಹೊಸ ವರ್ಷದ ಪಾಕೆಟ್ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿ ಮಾತನಾಡಿ, ಇಂದಿನ ಜಂಜಾಟದ ಬದುಕಿನಲ್ಲಿ ಜೀವನದಲ್ಲಿ ಶಾಂತಿ ಕಾಣಲು ಏಕೈಕ ಮಾರ್ಗ ಧ್ಯಾನ ಒಂದೇ ಆತ್ಮಶುದ್ಧಿ ಹೊಂದಲು ದಿನದ ಕೆಲ ಸಮಯವನ್ನು ಪರಮಾತ್ಮನ ಧ್ಯಾನ ಮಾಡುವ ಮೂಲಕ ತೊಡಗಿಸಿಕೊಂಡು ಮುಕ್ತಿ ಕಾಣುವಂತೆ ಅವರು ಕರೆ ನೀಡಿದರು.

ಆತ್ಮ ನಿರ್ವೀಕಾರ ಪರಂಜೋತಿ ಸ್ವರೂಪ ನಾವು ಭೇದ ಭಾವ ಹೊರತುಪಡಿಸಿ ಎಲ್ಲ ಸಂಸ್ಕೃತಿಯನ್ನು ಪ್ರೀತಿಸಬೇಕು ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು ಎಂದರು.

ಈಶ್ವರಿಯ ವಿಶ್ವವಿದ್ಯಾನಿಲಯದ ಹೊಸನಗರ ಶಾಖೆಯ ಸಂಚಾಲಕಿ ಬ್ರಹ್ಮಕುಮಾರಿ ಶೈಲಕ್ಕನವರು ಕಾರ್ಯಕ್ರಮ ನಿರ್ವಹಿಸಿದರು.

ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಗುರುರಾಜ್ ಚಂದ್ರಕಲಾ ನಾಗರಾಜ್, ಗಾಯತ್ರಿ ನಾಗರಾಜ್, ಡಿ.ವಿ ರೇವಣಪ್ಪ ಗೌಡ, ಚನ್ನಬಸಪ್ಪಗೌಡ, ರವಿ ಶೇಟ್ ಹಿರಿಯ ಪತ್ರಕರ್ತರಾದ ಉಡುಪಿ ಎಸ್ ಸದಾನಂದ, ಎಚ್.ಆರ್ ಶ್ರೀಕಂಠ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!