ಶಿವಮೊಗ್ಗ ; ಇಂದಿನ ಪ್ರಮುಖ ಸುದ್ದಿಗಳು

0 38

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿವಮೊಗ್ಗ ನಗರದ ಗೋಪಾಳದ ಶ್ರೀ ರಾಮಕೃಷ್ಣ ಮಕ್ಕಳ ತೋಟದಲ್ಲಿ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .ಸುಮಾರು 230 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಭಾಗವಹಿಸಿದ ಮಕ್ಕಳಿಗೂ ಪೋಷಕರಿಗೂ ಶಿಕ್ಷಕರಿಗೂ ಹಾಗೂ ಸ್ಪರ್ಧೆಯಲ್ಲಿ ಗೆದ್ದಂತ ಮಕ್ಕಳಿಗೂ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಮತ್ತು ಸಂಸ್ಥೆಯ ಅಧ್ಯಕ್ಷರಾದ ಡಾ|| ಡಿ ಆರ್ ನಾಗೇಶ್ ರವರು ಅಭಿನಂದಿಸಿದ್ದಾರೆ.

ಕುಸ್ತಿ ಮತ್ತು ಕಬಡ್ಡಿ ಪಂದ್ಯಾವಳಿಗೆ ರಾಜ್ಯ ತಂಡಕ್ಕೆ ಕ್ರೀಡಾಳುಗಳ ಆಯ್ಕೆ ಸ್ಪರ್ಧೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕುಸ್ತಿ ಮತ್ತು ಕಬಡ್ಡಿ ಪಂದ್ಯಾವಳಿಗೆ ರಾಜ್ಯ ತಂಡದ ಆಯ್ಕೆ ಮಾಡುತ್ತಿದ್ದು, ಆಸಕ್ತರು ಸೆ.09 ರಂದು ದಾವಣಗೆರೆ ಮತ್ತು ತುಮಕೂರಿನಲ್ಲಿ ಏರ್ಪಡಿಸುವ ಆಯ್ಕೆ ಪಂದ್ಯಗಳಲ್ಲಿ ಭಾಗವಹಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಕುಸ್ತಿ ಆಯ್ಕೆ ಪಂದ್ಯವು ಸೆ. 09 ರಂದು ಬೆಳಗ್ಗೆ 9.00 ರಿಂದ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸಂಪರ್ಕಿಸಬೇಕಾದ ತರಬೇತುದಾರು ವಿನೋದ್‍ಕುಮಾರ್ ಕೆ. ಮೊ.ಸಂ.:8971388143 ಮತ್ತು ತುಕಾರಾಮ್ ಮೊ.ಸಂ.: 9945489193. ಕ್ರೀಡಾಪಟುಗಳು ದಾವಣಗೆರೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು.


ಕಬಡ್ಡಿ ಆಯ್ಕೆ ಪಂದ್ಯವು ಸೆ. 09 ರಂದು ಬೆಳಗ್ಗೆ 09.00ಕ್ಕೆ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸಂಪರ್ಕಿಸಬೇಕಾದ ತರಬೇತುದಾರರು ಇಸ್ಮಾಯಿಲ್ ಮೊ.ಸಂ.: 9980588415 ಮತ್ತು ಶ್ರೀಶೈಲ. ಕ್ರೀಡಾಪಟುಗಳು ತುಮಕೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು.

2022-23ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಆಸಕ್ತ ಕ್ರೀಡಾಪಟುಗಳು ಮೇಲ್ಕಂಡ ದಿನಾಂಗಳಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎಂಫಿಲ್/ಪಿಹೆಚ್‍ಡಿ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಎಂ.ಫಿಲ್/ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಯೋಜನೆಯಡಿ ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಬೌದ್ಧ ಮತ್ತು ಸಿಖ್ ಸಮುದಾಯ ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದು, ಪೂರ್ಣಾವಧಿ ಕೋರ್ಸ್‍ಗೆ ಎನ್‍ರೋಲ್ ಮಾಡಿರಬೇಕು. ಗರಿಷ್ಟ ವಯೋಮಿತಿ 35 ವರ್ಷಗಳಾಗಿದ್ದು, ಪಾಲಕರ ವಾರ್ಷಿಕ ಆದಾಯ ರೂ. 8.00 ಲಕ್ಷಗಳಿಗಿಂತ ಮೀರಿರಬಾರದು, ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.
ಆಸಕ್ತರು sevasindhu.karnataka.gov.in ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ ಕಚೇರಿಗೆ ಅ.03 ರೊಳಗಾಗಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220206 ನ್ನು ಸಂಪರ್ಕಿಸುವುದು.

ಚರ್ಮ ಉತ್ಪನ್ನಗಳ ಮೇಲೆ 20% ರಿಯಾಯಿತಿ ಮಾರಾಟ
ಶಿವಮೊಗ್ಗದ ಡಾ| ಬಾಬು ಜನ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ನಗರದ ನೆಹರು ರಸ್ತೆ, ಬಸವಸದನ ಕಾಂಪ್ಲೇಕ್ಸ್‍ನ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ.20% ರಿಯಾಯಿತಿ ದರದಲ್ಲಿ ಸೆ. 20ರವರೆಗೆ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ನಿಗಮದ ವ್ಯವಸ್ಥಾಪಕರು/ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9480886268 ನ್ನು ಸಂಪರ್ಕಿಸುವುದು.

ಸೆ.09ರಂದು ನೊಗದ ದನಿ ಎನ್ನುವ ಹಾಡು ಬಿಡುಗಡೆ

ಸೆ. 09ರಂದು ನಗರದ ಮೀಡಿಯಾ ಹೌಸ್‌ ಸಭಾಂಗಣದಲ್ಲಿ ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್‌ ವಿರಚಿತ  ರೈತಗೀತೆ “ನೊಗದ ದನಿ”  ಹಾಡಿನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕಾಯಕ್ರಮದಲ್ಲಿ ಶಿರಾಳಕೊಪ್ಪದ ರೈತ ಮುಖಂಡರಾದ ಸತೀಶ್‌ ಮತ್ತು ಸಂಗಡಿಗರಿಂದ ಹಾಡು ಬಿಡುಗಡೆಯಾಗಲಿದ್ದು ಮುಖ್ಯ ಅತಿಥಿಗಳಾಗಿ ಎಂ.ಶ್ರೀಕಾಂತ್‌ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ, ರೋಟರಿ ವಿಜಯ್‌ ಕುಮಾರ್‌, ಪತ್ರಕರ್ತರಾದ ಎನ್.ರವಿಕುಮಾರ್‌, ಜೆಸಿ. ಜ್ಯೋತಿ ಅರಳಪ್ಪ ನವರು ಆಗಮಿಸಲಿದ್ದಾರೆ.


ಹಾಡಿನ ಧ್ವನಿ ಮುದ್ರಣದಲ್ಲಿ  ಗಾರಾ ಫಿಲಮ್ಸ್ ಅರ್ಪಿಸುವ ಹಾರೈಕೆ : ಎಂ. ಶ್ರೀಕಾಂತ್‌ ರವರದ್ದಾಗಿರುತ್ತದೆ, ಗಾಯನ : ಉಷಾದೇವಿ ಉಡುಪ ಸ್ವರ ಸಂಯೋಜನೆ : ಮಂಗಳಾ ಅಶೋಕ್, ಸಂಗೀತ : ಆದಿತ್ಯ.ಎ : ಅನಂತನಾದ ಸ್ಡುಡಿಯೋ. ಶಿವಮೊಗ್ಗದಲ್ಲಿ ಆಡಿಯೋ ರೆಕಾರ್ಡಿಂಗ್‌ ಆಗಿದ್ದು ಕಾರ್ತಿಕ್‌ ರವರು ಗ್ರಾಫಿಕ್‌ ಕೆಲಸ ಮಾಡಿದ್ದಾರೆ.
ಹಾಡಿನ ಬಿಡುಗಡೆಯ ಕಾರ್ಯಕ್ರಮಕ್ಕೆ ಸೇವಾಮುಖಿಗಳು, ಜನಪರ ದನಿಗಳು, ಕಲಾರಂಗದವರು ಆಗಮಿಸುವಂತೆ ಈ ಮೂಲಕ ಕೋರಲಾಗಿದೆ.

ಸಂವಾದ ಕಾರ್ಯಕ್ರಮ
ಭಾರತೀಯ ಮಾನಕ ಬ್ಯೂರೋ ಬಿ.ಐ.ಎಸ್. ಧಾರವಾಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರ ಸಂಘ ಇವುಗಳ ಸಹಯೋಗದಲ್ಲಿ ಸೆ. 08 ರಂದು ಬೆಳಗ್ಗೆ 10.00ಕ್ಕೆ ನಗರದ ಸಿಟಿಕ್ಲಬ್ ಹಿಂಭಾಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ “ಅಡಿಕೆ ಹಾಳೆ ಉತ್ಪನ್ನಗಳ ಪ್ರಮಾಣೀಕರಣದ ಮಹತ್ವ” ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ಆರ್. ನೆರವೇರಿಸಲಿದ್ದಾರೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಎನ್. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ವಾ.& ಕೈ. ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ, ಶಿ.ಅ.ಹಾ.ಉ.ತ.&ಮಾ. ಸಂಘದ ಅಧ್ಯಕ್ಷ ಮಂಜುನಾಥ ಜಿ., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕ್ಷೇತ್ರೀಯ ಮುಖ್ಯಸ್ಥ ಎ. ರಾಜುಮಣಿ, ಆ.ನಾ.ಸ.&ಗ್ರಾ.ವ್ಯ.ಇಲಾಖೆಯ ಉಪನಿರ್ದೇಶಕ ಅವಿನ್ ಆರ್. ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ.ಜಯಸ್ವಾಮಿ ಇವರುಗಳು ಉಪಸ್ಥಿತರಿರುವರು.

ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹುಬ್ಬಳ್ಳಿಯ ಬಿ.ಐ.ಎಸ್.ನ ವಿಜ್ಞಾನಿಗಳಾದ ಡಿ.ಪಿ.ಕುಮಾರ್ ಮತ್ತು ಶ್ರೀಮತಿ ಮರ್ಸಿರಾಣಿ ಎಸ್., ಮಾನಕ, ಮೌಲ್ಯವರ್ಧನ ತರಬೇತುದಾರ ಎಂ. ಮಹಮದ್ ಹಾಗು ಬಿ.ಐ,ಎಸ್. ಕಚೇರಿ ಸಹಾಯಕ ಭರತ್ ಇವರುಗಳು ಭಾಗವಹಿಸಲಿದ್ದಾರೆ.

Leave A Reply

Your email address will not be published.

error: Content is protected !!