ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಡ್‌ಶಫರ್ಡ್ ಶಾಲೆಗೆ ಸಮಗ್ರ ಪ್ರಶಸ್ತಿ

0 49

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ರಿಪ್ಪನ್‌ಪೇಟೆ ಗುಡ್‌ಶಫರ್ಡ್ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವುದರೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಶಾಲಾ ಎಸ್.ಡಿ.ಎಂ.ಸಿ ಸಮಿತಿಯವರು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ಬಾಲಕರ ವಿಭಾಗದ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, ರಿಲೇ 100 ಮೀಟರ್ ಓಟ, ಗುಂಡು ಎಸೆತ, ಎತ್ತರ ಜಿಗಿತ, ತಟ್ಟೆ ಎಸೆತ, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರೆ, ವಿದ್ಯಾರ್ಥಿನಿಯ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ತಟ್ಟೆ ಎಸೆತ, 200 ಮೀಟರ್ ಓಟ, ರಿಲೇ 100 ಮೀಟರ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಗುಡ್‌ಶಫರ್ಡ್ ಚರ್ಚ್‌ನ ಧರ್ಮಗುರು ರೆ.ಪಾ.ಬಿನೋಯ್ ಮುಖ್ಯ ಶಿಕ್ಷಕಿ ಜ್ಯೋಸ್ಪಿನ್, ದೈಹಿಕ ಶಿಕ್ಷಕ ಸುರೇಶ್, ಗುಡ್‌ಶಫರ್ಡ್ ಶಾಲೆಯ ಪೋಷಕರು ಶಿಕ್ಷಕ ಸಮಿತಿಯ ಸಬಾಸ್ಟಿನ್, ಹಸನಬ್ಬ ಬ್ಯಾರಿ, ದಯಾನಂದ ಶಿಕ್ಷಕರಾದ ರಾಘವೇಂದ್ರ, ಮಂಜುನಾಥ, ಷಣ್ಮುಖ ಇತರರು ಹಾಜರಿದ್ದರು.

ಬೈರಾಪುರ ಕಿರುಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಕಿರುಮಂತ್ರಾಲಯವೆಂದೇ ಪ್ರಖ್ಯಾತಿ ಪಡೆದಿರುವ ಶ್ರೀರಾಘವೇಂದ್ರ ಸ್ವಾಮಿಮಠದಲ್ಲಿ ಆಗಸ್ಟ್ 31 ರಿಂದ ಸೆಷ್ಟಂಬರ್ 2 ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ಕೆ.ದೇವರಾಜ್ ಪತ್ರಿಕೆ ಪ್ರಕಟಣೆ ತಿಳಿಸಿದೆ.

ಆಗಸ್ಟ್ 31 ರಂದು `ಪೂರ್ವಾರಾಧನೆ.ವಿಶೇಷ ಪೂಜೆಗಳು ತೀರ್ಥಪ್ರಸಾದ ವಿನಿಯೋಗ, ಸೆ.1 ರಂದು ಶುಕ್ರವಾರ “ಆರಾಧನೆ’’ ವಿಶೇಷ ಪೂಜೆ ತೀರ್ಥಪ್ರಸಾದ ವಿನಿಯೋಗ, ಸಾಮೂಹಿಕ ಅನ್ನಸಂತರ್ಪಣೆ ಸೆ.2 ರಂದು ಉತ್ತರಾರಾಧಾನೆ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗುರುಸಾರ್ವಭೌಮರ ದರ್ಶನಾಶೀರ್ವಾದ ಪಡೆಯುವಂತೆ ಮಠದ ಕಾರ್ಯದರ್ಶಿ ಕೆ.ದೇವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!