ವೃದ್ಧೆಯ ಜೀವವನ್ನೇ ಬಲಿ ಪಡೆದ ದೀಪ!

0
1215

ಶಿವಮೊಗ್ಗ: ದೀಪ ಹಚ್ಚಿಕೊಂಡು ಮಲಗಿದ್ದ ವೃದ್ಧೆಯೊಬ್ಬರ ಸೀರೆಗೆ ಆಕಸ್ಮಿಕವಾಗಿ ದೀಪದ ಬೆಂಕಿ ತಗುಲಿ ಮೃತಪಟ್ಟಿರುವ ಘಟನೆ ವೆಂಕಟೇಶ ನಗರದಲ್ಲಿ ನಡೆದಿದೆ.

ಘಟನಾ ವಿವರ:

ಬುಧವಾರ ಇಲ್ಲಿನ ವೆಂಕಟೇಶ ನಗರದ ರಾತ್ರಿ ಲಕ್ಷ್ಮಮ್ಮ (65) ಎಂಬುವವರು ಮನೆಯಲ್ಲಿ ಕರೆಂಟ್ ಹೋಗಿದ್ದ ಕಾರಣ ದೀಪವನ್ನು ಹಚ್ಚಿಕೊಂಡು ಮಲಗಿದ್ದು, ಆಕಸ್ಮಿಕವಾಗಿ ದೀಪವು ಅವರ ಸೀರೆಗೆ ತಗುಲಿ ಬೆಂಕಿ ಹತ್ತಿಕೊಂಡು ಮೈ, ಕೈಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟಿರುತ್ತಾರೆಂದು ಮೃತೆಯ ಮಗ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಸಾವು!

ಸೊರಬ ತಾಲ್ಲೂಕಿನ ಕಮನವಳ್ಳಿ ಎಂಬಲ್ಲಿ ಬುಧವಾರ ಬೆಳಗ್ಗೆ ರವಿನಾಯ್ಕ (34) ಎಂಬುವವರು ಕೂಲಿ ಕೆಲಸಕ್ಕೆ ಹೋಗಿದ್ದವರು ಕೆಲಸ ಮುಗಿಸಿ ಸಂಜೆ ಆನವಟ್ಟಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎಣ್ಣೆಕೊಪ್ಪ ಗ್ರಾಮದ ಬುಟ್‌ ಕಟ್ಟೆ ಕೆರೆಯಲ್ಲಿ ಕೈ ಕಾಲು ಮುಖ ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆಂದು ಮೃತನ ತಂದೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here