ಬೆಂಬಲಿಗರೊಂದಿಗೆ ಆಯನೂರು ಮಂಜುನಾಥ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

0 57

ಶಿವಮೊಗ್ಗ : ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವ ಯಾವುದೇ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯಾ ಜಿಲ್ಲಾ ಸಮಿತಿಗೆ ಅಧಿಕಾರ ವಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ
ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದಿಲ್ಲಿ ಹೇಳಿದರು.

ಅವರಿಂದು ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ‌ ಕಛೇರಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್ ಹಾಗೂ ಶಿಕಾರಿಪುರದ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತ ಪಡೆದ ನಾಗರಾಜ್ ಗೌಡ ಸೇರಿದಂತೆ ನೂರಾರು ಪ್ರಮುಖ ಪರಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಹಾಗೂ ಭರವಸೆಗಳು ಯಾವತ್ತೂ ತಪ್ಪಾಗಿಲ್ಲ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣ ನೀಡುತ್ತೇವೆಯಿಂದ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಅಂತೀಯ ಪಕ್ಷಕ್ಕೆ ಸೇರ್ಪಡೆ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಪಕ್ಷದ ಮತ ಬ್ಯಾಂಕ್ ಗಟ್ಟಿಯಾಗಲು ಸಮಿತಿಗಳು ಆಯಾ ಜಿಲ್ಲಾ ಸಮಿತಿಗಳು ಕ್ರಮಗೊಳ್ಳಬೇಕು. ಬಿಜೆಪಿ‌ ಹಾಗೂ ಜೆಡಿಎಸ್ ನವರು ಏನು ಬೇಕಾದರೂ ಹೇಳಲಿ ಅದರ ಬಗ್ಗೆ ತಲೆಕೆಡಿಸಿ ಕೊಳ್ಳಬೇಡಿ ಎಂದರು.

ಯಾವುದೇ ಆಮಿಷಗಳನ್ನು ನಾವು ನೀಡುವುದಿಲ್ಲ. ಪಕ್ಷದ ಬಲವರ್ಧನೆಗೆ ಪ್ರಯತ್ನಿಸಿ. ಒಮ್ಮೆ ಪಕ್ಷಕ್ಕೆ ಸೇರಿಕೊಂಡರೆ ನಂತರ ಬಿಡುವ ಮಾತನಾಡಬೇಡಿ. ಪಕ್ಷವನ್ನು ಬೆಳೆಸಿ ಪಕ್ಷದ ಉನ್ನತ ಹುದ್ದೆಗಳನ್ನು ಪಡೆಯಿರಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹಲವು ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ‌ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಪಕ್ಷದ ನಿಯಮಗಳನ್ನು ಒಪ್ಪಿಕೊಂಡು ಯಾವುದೇ ಆಮಿಷಗಳನ್ನು ನೀಡದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಪಕ್ಷವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಸುವ ಜೊತೆಗೆ ಪಕ್ಷದ ನಿಯಮಗಳಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಗೌಡ‌ ಅವರು ಮಾತನಾಡಿದರು.‌ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು‌ ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಮೀರ್ ಅಹಮದ್, ಚಂದ್ರಪ್ಪ, ಸಾಗರ‌ ಶಾಸಕ ಬೇಳೂರು ಗೋಪಾಲಕೃಷ್ಣ, ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಅಪೆಕ್ಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಶಿವಮೊಗ್ಗ ಪಾಲಿಕೆ ಸದಸ್ಯ ಧೀರರಾಜ್‌ ಹೊನ್ನವಿಲೆ, ಮಾಜಿ ಸದಸ್ಯ ಐಡಿಯಲ್ ಗೋಪಿ, ಪ್ರಮುಖರಾದ ಮಹೇಂದ್ರ ನಾಥ್, ಕೋಟಿ ಲೋಕೇಶ್ವರ್, ಲೋಕೇಶಪ್ಪ ಕೃಷ್ಣ, ಶಿ.ಜು. ಪಾಷಾ, ಪರಂಧಾಮರೆಡ್ಡಿ ಹಾಗೂ ಇತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ‌ ಹೊಂದಿದರು.

Leave A Reply

Your email address will not be published.

error: Content is protected !!