ಶಾರದಾಂಬೆ ದರ್ಶನ ಜೊತೆ ಗುರುಗಳ ಆಶೀರ್ವಾದ ಪಡೆದ ರಾಷ್ಟ್ರಪತಿ ರಾಮನಾಥ ಕೋವಿಂದ್

0
895

ಶೃಂಗೇರಿ : ಭಾರತದ ಪ್ರಥಮ ಪ್ರಜೆ ರಾಮನಾಥ ಕೋವಿಂದ್ ತಮ್ಮ ಕುಟುಂಬ ಸಮೇತರಾಗಿ ಶೃಂಗೇರಿಯ ಮೆಣಸೆ ಹೆಲಿಪ್ಯಾಡ್ ಗೆ ಮಧ್ಯಾಹ್ನ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ರಾಷ್ಟ್ರಾಧ್ಯಕ್ಷರು ಶಾರದಾಂಬೆ ದರ್ಶನದ ಬಳಿಕ ಗುರುಗಳ ಆಶೀರ್ವಾದ ಪಡೆದು ನವರಾತ್ರಿ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

ಶೃಂಗೇರಿ ಮಠದ ವತಿಯಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಆನೆ, ಆಶ್ವ, ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗಿದ್ದು, ರಾಷ್ಟ್ರಪತಿಗಳು ಸಂಜೆ ನಾಲ್ಕು ಗಂಟೆವರೆಗೂ ಶಾರದೆಯ ಸನ್ನಿಧಿ ಇದ್ದು ನಂತರ ತೆರಳುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ರಾಷ್ಟ್ರಪತಿಯನ್ನು ನೋಡಲು ನಿಂತಿದಂತಹ ವಿದ್ಯಾರ್ಥಿಗಳನ್ನು ನೋಡಿ ಕಾರಿನಿಂದ ಇಳಿದು ಅಲ್ ದಿ ಬೆಸ್ಟ್ ಹೇಳಿ ತೆರಳಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿ ಶಾರದಾಂಬಾ ದೇಗುಲಕ್ಕೆ ಭೇಟಿ ನೀಡಿದ ಹಿನ್ನೆಲೆ ಶೃಂಗೇರಿ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಎನ್.ಎಸ್.ಜಿ. ತಂಡದೊಂದಿಗೆ ಸುಮಾರು 800-1000 ಪೊಲೀಸರು, ರಾಜ್ಯ ಹಾಗೂ ರಾಷ್ಟ್ರೀಯ ಗುಪ್ತಚರ ಪೊಲೀಸರು ಕಳೆದ ಎರಡು ದಿನದಿಂದ ಶೃಂಗೇರಿಯಲ್ಲಿ ಬಂದೋಬಸ್ತ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಶೃಂಗೇರಿ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ರಾಷ್ಟ್ರಪತಿಗಳು ಸಂಚರಿಸುವ ಕಾನ್ವೇನಲ್ಲಿ 30 ಅಡಿಗೆ ಒಬ್ಬ ಪೊಲೀಸರು ನಿಂತಿದ್ದು ಕಂಡು ಬಂದಿತು.

ರಾಷ್ಟ್ರಪತಿ ಆಗಮನ ಸರಳತೆಗಾಗಿ ಜಿಲ್ಲಾಡಳಿತ ಶೃಂಗೇರಿ ಪಟ್ಟಣದಲ್ಲಿ ಮೆಣಸೆ ಹಾಗೂ ಗಾಂಧಿ ಮೈದಾನಗಳಲ್ಲಿ ಎರಡು ಹೆಲಿಪ್ಯಾಡ್ ಗಳನ್ನ ನಿರ್ಮಿಸಲಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here