ಹೊಸನಗರ: ಅಡಿಕೆ ಕಳವು ಬಂಧನ !

0
1734

ಹೊಸನಗರ : ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಆದರ್ಶ ಎಂಬುವವರ ಮನೆಯಲ್ಲಿ ಸಂಗ್ರಹಿಸಿದ್ದ 1.20 ಲಕ್ಷ ರೂ. ಮೌಲ್ಯದ ಅಡಿಕೆ ಕಳವು ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಟ್ಟೆಮಲ್ಲಪ್ಪ ಗ್ರಾಮದ ನಿವಾಸಿ, ಸಾಗರ ಪಟ್ಟಣದ ಅಡಿಕೆ ವ್ಯಾಪಾರಿ ರಹೀಮ್ ಸಾಬ್ ಬಂಧಿತ ಆರೋಪಿಯಾಗಿದ್ದು, ಆರೋಪಿಯು ಆದರ್ಶ ಅವರ ಮನೆಯಿಂದ ಸಿಪ್ಪೆಗೋಟು ಮತ್ತು ಚಾಲಿ ಅಡಿಕೆಯನ್ನು ಕಳವು ಮಾಡಿದ್ದ.

ಸಿಪಿಐ ಮಧುಸೂಧನ್ ಮತ್ತು ಪಿಎಸ್‌ಐ ರಾಜೇಂದ್ರನಾಯಕ್ ನೇತೃತ್ವದಲ್ಲಿ ಎಎಸ್‌ಐ ಶ್ರೀನಿವಾಸ್, ಸಿಬ್ಬಂದಿ ಸತೀಶ್ ರಾಜ್, ಆದರ್ಶ, ಕಿರಣ್, ಅಮೃತ್ ಸಾಗರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here