ಬಾಪೂಜಿ ವಿದ್ಯಾ ಸಂಸ್ಥೆ ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಅಭಿನಂದನೆ

0 419

ಶಿಕಾರಿಪುರ : ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಹೆಮ್ಮೆಯಾಗಿದ್ದು, ಇದರಿಂದಾಗಿ ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯ ಏಳ್ಗೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಮತ್ತು ರಾಜ್ಯ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾಪಯ್ಯ ತಿಳಿಸಿದರು. 

ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯನ್ನು 1991 ರಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಿ, 1992 ರಲ್ಲಿ ಪ್ರೌಢಶಾಲೆ ತೆರೆಯಲಾಯಿತು. ನಂತರ 2011-12 ರಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ  ಪ್ಯಾರಾಮೆಡಿಕಲ್ ಆರಂಭಿಸಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದು,ಇದನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರ್ಕಾರವು 2023 -24  ಸಾಲಿನಲ್ಲಿ ನೀಡಲಾಗುತ್ತಿರುವ ಒಟ್ಟು 5 ಸಂಸ್ಥೆಗಳಿಗೆ ಉತ್ತಮ ಶಿಕ್ಷಣ ಸಂಸ್ಥೆ ಎಂದು ಗುರುತಿಸಿ ನೀಡಲಾಗುತ್ತಿರುವ ಪ್ರಶಸ್ತಿಯಲ್ಲಿ ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯನ್ನು ಸಹ ಗುರುತಿಸಿ ಒಂದು ಲಕ್ಷ ರೂಪಾಯಿ, ಒಂದು ಪಾರಿತೋಷಕ ಮತ್ತು ರಾಜ್ಯ ಉತ್ತಮ ಶಿಕ್ಷಣ ಸಂಸ್ಥೆಯ  ಪ್ರಶಸ್ತಿಯನ್ನು ನೀಡಿ ನನಗೆ ಗೌರವಿಸಿದೆ  ಇದಕೋಸ್ಕರ ನಮ್ಮ ಸಂಸ್ಥೆಯ ಏಳ್ಗೆಗೆ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಎಲ್ಲರಿಗೂ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೂ ನಾನು ಅಭಿನಂದಿಸುತ್ತೇನೆ ಎಂದರು.

ಪಟ್ಟಣದ ಹೃದಯ ಭಾಗದಲ್ಲಿರುವ ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯು ಕಳೆದ 30 ವರ್ಗಗಳಿಂದಲೂ ಸಾವಿರಾರು ನಿರ್ಗತಿಕ, ಅನಾಥ ಹಾಗೂ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಲ್ಲದೇ, ಬಾಪೂಜಿ ಪದವಿಪೂರ್ವ ಕಾಲೇಜನ್ನು ತೆರೆದು ಅತ್ಯಂತ ವೆಚ್ಚದಾಯಕ ವಿಷಯವಾಗಿರುವ ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪ್ಯಾರಾಮೆಡಿಕಲ್ ಆರಂಭಿಸಿ ಸಾವಿರಾರು ನಿರ್ಗತಿಕ ಅನಾಥ ಹಾಗೂ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದಲ್ಲಿ ಉಚಿತ ಶಿಕ್ಷಣ ನೀಡುತ್ತಾ ಅವರಿಗೆ ಉದ್ಯೋಗ ಕೊಡಿಸುವಲ್ಲಿ ನಮ್ಮ ಬಾಪೂಜಿ ವಿದ್ಯಾ ಸಂಸ್ಥೆಯು ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರ್ಕಾರವು ಉತ್ತಮ ಶಿಕ್ಷಣ, ಸಹಕಾರ ಮತ್ತು ಸೇವೆಗಳನ್ನು ಗುರುತಿಸಿ, 2023-24 ಸಾಲಿನ ಉತ್ತಮ ಶಿಕ್ಷಣ ಸಂಸ್ಥೆ ಎಂದು ನ. 23 ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಂದ ನನಗೆ ಸನ್ಮಾನಿಸಿ ಗೌರವಿಸಲಾಗಿದ್ದು, ಇದಕೋಸ್ಕರ ಡಿ. 22ರ ಶುಕ್ರವಾರದಂದು ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ  ಸಂಸ್ಥೆಯ ಏಳ್ಗೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಎಲ್ಲರಿಗೂ ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. 

ಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪವಿತ್ರಾ , ಪ್ರಾಂಶುಪಾಲ ಮುಸ್ತಫಾ ಹಾಗೂ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ಇದ್ದರು.

Leave A Reply

Your email address will not be published.

error: Content is protected !!