ಹೊಸನಗರ; 09 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆಗೆ 1620 ವಿದ್ಯಾರ್ಥಿಗಳು

0
888

ರಿಪ್ಪನ್‌ಪೇಟೆ: ಇದೇ ಮಾರ್ಚ್ 28 ರಿಂದ ಆರಂಭವಾಗುವ ಎಸ್.ಎಸ್.ಎಲ್.ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಗೆ ಹೊಸನಗರ ತಾಲ್ಲೂಕಿನ 09 ಪರೀಕ್ಷಾ ಕೇಂದ್ರದಿಂದ ಒಟ್ಟು 1620 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಹೊಸನಗರ, ಹೊಲಿರೆಡಿಮಾರ್, ಜಯನಗರ, ಮಾರುತಿಪುರ, ರಿಪ್ಪನ್‌ಪೇಟೆ, ಮೇರಿಮಾತಾ, ಕಮ್ಮಚ್ಚಿ, ನಗರ, ನಿಟ್ಟೂರು ಈ 09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪೂರ್ವ ಸಿದ್ದತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ವೀರಭದ್ರಪ್ಪ ವಿವರಿಸಿದರು.

ರಿಪ್ಪನ್‌ಪೇಟೆಯ ಎರಡು ಪರೀಕ್ಷಾ ಕೇಂದ್ರದಲ್ಲಿ 195 ಬಾಲಕರು 196 ಬಾಲಕಿಯರು ಸೇರಿ ಒಟ್ಟು 391 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ತಪಾಸಣೆ, ಆಸನದ ವ್ಯವಸ್ಥೆ, ಶೌಚಾಯಲದ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಮಾಡಿಕೊಳ್ಳಲಾಗಿದೆ.

ಈ ಎರಡು ಪರೀಕ್ಷಾ ಕೇಂದ್ರಕ್ಕೆ ರಿಪ್ಪನ್‌ಪೇಟೆ, ಅರಸಾಳು, ಚಿಕ್ಕಜೇನಿ, ಬೆಳ್ಳೂರು ಸರ್ಕಾರಿ ಪ್ರೌಢಶಾಲೆಗಳು ಮತ್ತು ಅನುದಾನಿತ ಖಾಸಗಿ ಪ್ರೌಢಶಾಲೆಗಳ್ದ ಶ್ರೀಬಸವೇಶ್ವರ, ಮೇರಿಮಾತಾ, ಕಲ್ಲುಹಳ್ಳ, ಶಾರಾದರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಾಗುವರೆಂದು ಹೇಳಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here