ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಆರೋಪ ; ಖಾಸಗಿ ಕಾಲೇಜ್ ಪ್ರಿನ್ಸಿಪಾಲ್ ಬಂಧನ

0 42

ಶಿವಮೊಗ್ಗ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಜಾತಿನಿಂದನೆ ಆರೋಪದಡಿ ಖಾಸಗಿ ಕಾಲೇಜ್ ಪ್ರಿನ್ಸಿಪಾಲ್ ರನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫ್ರಾನ್ಸಿಸ್​ ಫರ್ನಾಂಡಿಸ್ ಬಂಧಿತ ಪ್ರಿನ್ಸಿಪಾಲ್. ಫ್ರಾನ್ಸಿಸ್​ ಫರ್ನಾಂಡಿಸ್ ಚರ್ಚ್ ಫಾದರ್​ ಕೂಡ ಆಗಿದ್ದಾರೆ.​​ ಸದ್ಯ ಫ್ರಾನ್ಸಿಸ್​ ಫರ್ನಾಂಡಿಸ್ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಕೇಸ್​ ದಾಖಲಿಸಲಾಗಿದೆ.

ಸೆಕ್ರೆಡ್ ಹಾರ್ಟ್ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಸುವ ನಾಟಕವಾಡಿದ್ದರು ಎನ್ನಲಾಗಿದೆ. ಎಸ್​ಸಿಎಸ್​ಟಿ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. ಫರ್ನಾಂಡಿಸ್ ಕಿರುಕುಳದಿಂದ ವಿದ್ಯಾರ್ಥಿನಿ ನಿನ್ನೆ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Leave A Reply

Your email address will not be published.

error: Content is protected !!