ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್, ಸುಮೋಟೋ ಕೇಸ್ ದಾಖಲು

0 352

ರಿಪ್ಪನ್‌ಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖ್ಯಾತಿಗೆ ಕುಂದುಂಟು ಮಾಡುವ ಉದ್ದೇಶದಿಂದ ಅವರ ಫೋಟೊವನ್ನ ಮಾರ್ಫಿಂಗ್ ಮಾಡಿ ಲೇವಡಿ ರೀತಿ ಬಿಂಬಿಸಿದ ವ್ಯಕ್ತಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಪೋಸ್ಟ್ ಮಾಡಿದ್ದು, ಇನ್ಸ್ಟಾಗ್ರಾಂ ಹಾಗೂ ಫೇಸ್‍ಬುಕ್ ಅನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ ಮಾ.16 ರಂದು ಹುಂಚ ಗ್ರಾಮದ ಸುಬ್ರಹ್ಮಣ್ಯ @ ಸುಬ್ಬು @ ಕನ್ನಡದ ಜಾಗ್ವಾರ್ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾದ ಐಡಿಯಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ರವರ ಬೆತ್ತಲೆ ಭಾವಚಿತ್ರ ಹಾಗೂ ಟಿಪ್ಪು ಸುಲ್ತಾನ್ ರ ಬೆತ್ತಲೆ ಭಾವಚಿತ್ರ ರಚಿಸಿ ಅದರಲ್ಲಿ ಸಿದ್ದರಾಮಯ್ಯ ರವರು ಟಿಪ್ಪುಸುಲ್ತಾನ್ ರ ಗಲೀಜ್ ತೊಳೆಯುತ್ತಿರುವ ಹಾಗೆ ಇರುವ ಭಾವಚಿತ್ರವಿದೆ.‌ ಅದರ ಮೇಲ್ಭಾಗದಲ್ಲಿ “ನಂಗೇನ್ ಗೊತ್ತಿಲ್ಲಪ್ಪ ” ಅಂತ ಬರೆಯಲಾಗಿದೆ. ಇನ್ನೊಂದು ಭಾವಚಿತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಪ್ಪನೆ ಬಣ್ಣದ ಬುರ್ಕಾ ಧರಿಸಿರುವಂತಹ ಭಾವಚಿತ್ರವಿದ್ದು ಇವುಗಳನ್ನು ತಮ್ಮ ಫೇಸ್‍ಬುಕ್ ಐಡಿಯಲ್ಲಿ ಫೋಸ್ಟ್ ಮಾಡಲಾಗಿತ್ತು.

ಹುಂಚ ಗ್ರಾಮದ ಸುಬ್ರಹ್ಮಣ್ಯ @ ಸುಬ್ಬು @ ಕನ್ನಡದ ಜಾಗ್ವಾರ್ ಎಂಬುವವರು ಸಿದ್ದರಾಮಯ್ಯ ರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೆಂದು ಗೊತ್ತಿದ್ದರೂ ಸಹಾ ಅವರ ಖ್ಯಾತಿಗೆ ಕುಂದುಂಟು ಮಾಡುವ ಉದ್ದೇಶದಿಂದ ಸರ್ಕಾರದ ಪ್ರಜಾ ಪ್ರತಿನಿಧಿಗಳ ವಿರುದ್ಧ ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ಇನ್ಸ್ಟಾಗ್ರಾಂ ಗಳಲ್ಲಿ ಪೋಸ್ಟ್ ಮಾಡಿ ಅವಹೇಳನಗೊಳಿಸಿರುತ್ತಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಿನ ಕ್ರಮಕ್ಕಾಗಿ ಸುಮೋಟೋ ಕೇಸ್ ದಾಖಲಾಗಿದೆ.

Leave A Reply

Your email address will not be published.

error: Content is protected !!