ಮಾಜಿ ಶಾಸಕ ಸಿ.ಟಿ ರವಿ ಮೇಲೆ FIR ದಾಖಲು ! ಯಾಕ್ ಗೊತ್ತಾ ?

0 347

ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಚುನಾವಣಾಧಿಕಾರಿ ದೂರಿನ ಮೇರೆಗೆ ನಗರ ಪೋಲಿಸ್ ಠಾಣೆಯಲ್ಲಿ ಮಾಜಿ ಶಾಸಕ ಸಿ.ಟಿ ರವಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎಫ್ಐಆರ್ ದಾಖಲಾಗಿದ್ದು, ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ತಮ್ಮ ಟ್ವಿಟರ್ (X) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ದ್ವೇಷದ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಪೂರಿತ ಪೋಸ್ಟ್ ಮಾಡಿ ‘ಸಾಗರಗಳ ಆಳವನ್ನ ಅಳೆಯಬಹುದು ರಾಹುಲ್ ಗಾಂಧಿ ದ್ವೇಷ ಕಂಡುಹಿಡಿಯಲಾಗಲ್ಲ.
ಹಿಂದೂ ಧರ್ಮದ ವಿರುದ್ಧದ ದ್ವೇಷ ಕಂಡುಹಿಡಿಯಲಾಗಲ್ಲ, ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ತೆಗೆದು ಹಾಕಬೇಕಿದೆ.’ ಎಂದು ಟ್ವೀಟ್ ಮಾಡಲಾಗಿದೆ.

ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಹಾಕಿದ್ದ ಸಿ.ಟಿ ರವಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಗೆ ಚುನಾವಣಾ ಆಯೋಗ ಸೂಚನೆ ಹಿನ್ನೆಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಜಯಲಕ್ಷ್ಮಮ್ಮ ದೂರು ನೀಡಿದ್ದು ಇದರ ಅನ್ವಯ ಸಿ.ಟಿ ರವಿ ವಿರುದ್ಧ ಐಪಿಸಿ ಸೆಕ್ಷನ್ 153 ಹಾಗೂ ಆರ್ ಪಿ ಆಕ್ಟ್ 126 ಅನ್ವಯ ಎಫ್ಐಆರ್ ದಾಖಲಾಗಿದೆ.

Leave A Reply

Your email address will not be published.

error: Content is protected !!