Hosanagara | ರಾಮಚಂದ್ರಪುರ ಮಠದ ಮಹಾನಂದಿ ಗೋಲೋಕದಲ್ಲಿ ನಡೆದ ಗೋಪೂಜೆ

0 835

ಹೊಸನಗರ : ಪಟ್ಟಣಕ್ಕೆ ಹೊಂದಿಕೊಂಡಂತಿರುವ ಶ್ರೀರಾಮಚಂದ್ರಪುರ ಮಠದ (Ramachandrapura Mutt) ಮಹಾನಂದಿ ಗೋಲೋಕದಲ್ಲಿ ಗೋಪೂಜೆ (Gopooje) ಸಡಗರ ಸಂಭ್ರಮದಿಂದ ನಡೆಯಿತು.

ನಾಡಿನ ವೈಶಿಷ್ಟ್ಯಗಳಲ್ಲಿ ವಿಶ್ವ ವಿಖ್ಯಾತವಾಗಿರುವುದು ದೀಪಾವಳಿ (Deepavali) ಹಬ್ಬದಾಚರಣೆ ಎನ್ನುವುದು ಬೆಳಕಿನ ಹಾಗೂ ಗೋವಿನ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಮಾಡುವ ಗೋಪೂಜೆ ನಮ್ಮ ಬದುಕಿಗೆ ಬಾಳಿಗೆ ಶಕ್ತಿಯನ್ನು ತೃಪ್ತಿಯನ್ನು ನೀಡುವುದು ಎಂಬ ನಂಬಿಕೆ ಇದೆ.

ಶರಾವತಿ ನದಿ ತಟದಲ್ಲಿ ಇರುವ ಶ್ರೀರಾಮಚಂದ್ರಪುರ ಮಠದ ಪರಿಸರದಲ್ಲಿ ಗೋಲೋಕದಲ್ಲಿ ವಿಶಿಷ್ಟವಾಗಿ ಗೋ ಸಂರಕ್ಷಣ ಕಾರ್ಯ ಹಾಗೂ ಗೋಪೂಜೆ ಸಡಗರ ಸಂಭ್ರಮ ವರ್ಣನಾತೀತವಾಗಿದೆ.

ಈ ಮಠದಲ್ಲಿ ವಿಶೇಷವಾಗಿ ದೀಪಾವಳಿ ಗೋ ಪೂಜೆಯಲ್ಲಿ ಪಾಲ್ಗೊಳ್ಳಲು ಶ್ರೀ ಮಠ ಭಕ್ತ ವೃಂದದವರೆಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದು ಸೇವಾಕರ್ತರಿಗೆ ಗೋ ಲೋಕದಲ್ಲಿ ವಿಶೇಷವಾಗಿ ತಯಾರಿಸುವ ಸಿಹಿ ಕಡಬುಗಳನ್ನ ಗೋವುಗಳಿಗೆ ತಿನ್ನಿಸುವ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಗೋಪೂಜೆ, ಗೋ ಆರತಿ, ಗೋಗ್ರಾಸ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.

Leave A Reply

Your email address will not be published.

error: Content is protected !!