ಸಿಡಿಲು ಬಡಿದು 18 ಕುರಿಗಳು ಸಾವು !

0 653

ಶಿವಮೊಗ್ಗ : ಸಿಡಿಲು (Thunderbolt) ಬಡಿದು 18 ಕುರಿಗಳು (Sheep’s) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಆಯನೂರಿನ ಕೋಟೆಯಲ್ಲಿ ಶುಕ್ರವಾರ ನಡೆದಿದೆ.

ಸಂಜೆ ಸಾಧಾರಣ ಮಳೆಯಾಗುತ್ತಿತ್ತು. ನಂತರ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ. ಮಾಲೀಕ ಝಾಕಿರ್ ಹುಸೇನ್ ಅವರು ಕುರಿಗಳನ್ನು ಮೇಯಿಸಲು ಮಕ್ಕಳೊಂದಿಗೆ ಆಯನೂರು ಕೋಟೆ ಪಕ್ಕದ ಬಯಲಿಗೆ ಹೊಡೆದುಕೊಂಡು ಹೋಗಿದ್ದರು‌. ಸಾಧಾರಣ ಮಳೆಯ ನಂತರ ಆಕಸ್ಮಿಕವಾಗಿ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ.

ಝಾಕಿರ್ ಅವರ ಕುಟುಂಬ ಕುರಿ ಮಾರಾಟದಿಂದಲೇ ಜೀವನ ನಡೆಸುತ್ತಿತ್ತು. ಪಶುಸಂಗೋಪನಾ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಗ್ರಾಮದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದರು.

ಇನ್ನೂ ಆಯನೂರು ಬಳಿ ಮರವೊಂದು ಬುಡಮೇಲಾಗಿ ಹೆದ್ದಾರಿಗೆ ಉರುಳಿ ಬಿದ್ದಿತ್ತು. ಇದರಿಂದಾಗಿ ಕೆಲ ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಇನ್ನೊಂದೆಡೆ ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನ ವಿವಿಧೆಡೆಯು ಮಳೆಯಾಗಿದೆ. ಇದರಿಂದ ಈ ಭಾಗದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. 

Leave A Reply

Your email address will not be published.

error: Content is protected !!