ಇನ್ಮುಂದೆ ಇಂತಹ ಫೋನ್‌ಗಳಲ್ಲಿ WhatsApp ಕೆಲಸ ಮಾಡಲ್ಲ…! ನಿಮ್ಮ ಫೋನ್‌ ಈ ಲಿಸ್ಟ್‌ಗೆ ಸೇರಿದೆಯಾ..?

0 625

ವಾಟ್ಸಾಪ್ ಒಂದು ಪ್ರಮುಖ ಮೆಸೇಜಿಂಗ್‌ ಪ್ಲಾರ್ಟ್‌ಫಾರ್ಮ್‌ ಆಗಿದ್ದು, ವಾಟ್ಸಾಪ್ ನ ಬಳಕೆದಾರರು ಹೆಚ್ಚಿನವರಿದ್ದಾರೆ. ವಾಟ್ಸಾಪ್ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಜಾರಿಗೆ ಬರುತ್ತಿದೆ. ಹೊಸ ಹೊಸ ವೈಶಿಷ್ಟಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ವಾಟ್ಸಾಪ್ ಒಂದು ಮೆಸೆಜಿಂಗ್‌ ಪ್ಲಾರ್ಟ್‌ಫಾರ್ಮ್‌ ಆಗಿದ್ದು, ಬಳಕೆದಾರರ ಅನುಭವ ಗೌಪ್ಯತೆ ಹಾಗೂ ಸೆಕ್ಯೂರಿಟಿಯನ್ನು ಸುಧಾರಿಸಲು ನಿಯಮಿತವಾಗಿ ತನ್ನ ಹೊಸ ವೈಶಿಷ್ಟ್ಯಗಳನ್ನು ಭದ್ರತಾ ಪರಿಹಾರದೊಂದಿಗೆ ನವೀಕರಿಸುತ್ತದೆ. ವಾಟ್ಸಾಪ್ ನಲ್ಲಿ ಈಗ ಹೊಸದಾಗಿ ಸೇರ್ಪಡೆಯಾಗಿರುವ ಚಾನೆಲ್‌ ಗಳು ಹಾಗೂ ಹೈಲೈಟ್ಸ್‌ ಗಳನ್ನು ಕೂಡ ಹಾಕುವಂತಹ ಪೀಚರ್‌ ಅನ್ನು ಸೇರಿಸಲಾಗಿದೆ.

ಆದರೆ ಹೊಸ ಆಪರೇಟಿಂಗ್ ಸಿಸ್ಟಮ್ಗಳಿಗೆ ಕೆಲವೊಂದು ಫೋನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೊಸ ನವೀಕರಣಗಳೊಂದಿಗೆ ವಾಟ್ಸಾಪ್ ಹಳೆಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ಗಳಿಗೆ ಬೆಂಬಲಗಳನ್ನು ತೆಗೆದು‌ ಹಾಕುತ್ತದೆ, ಇದರಿಂದಾಗಿ ವಾಟ್ಸಾಪ್ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. ಇದೇ ಅಕ್ಟೋಬರ್ 24 ರ ನಂತರದಲ್ಲಿ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್ ಫೋನ್ ಗಳಿಗೆ Whatsapp ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ತಿಳಿಸಿದೆ.

ವಾಟ್ಸಾಪ್ ತನ್ನ ಕಾರ್ಯನಿರ್ವಹಿಸದ ಆಂಡ್ರಾಯ್ಡ್ ಫೋನ್ ಗಳ ಪಟ್ಟಿ:
ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ:

  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2
  • LG ಆಪ್ಟಿಮಸ್ ಜಿ ಪ್ರೊ
  • ಮೊಟೊರೊಲಾ ಡ್ರಾಯ್ಡ್ ರೇಜರ್
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2
  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್
  • ಸೋನಿ ಎಕ್ಸ್ ಪೀರಿಯಾ ಎಸ್ 2
  • Sony Xperia Z
  • LG ಆಪ್ಟಿಮಸ್ 2X
  • ಮೊಟೊರೊಲಾ ಕ್ಸೂಮ್
  • HTC ಸಂವೇದನೆ
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
  • Acer Iconia ಟ್ಯಾಬ್ A5003
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್
  • HTC ಒನ್
  • ಆಸೂಸ್ ಈ ಪ್ಯಾಡ್ ಟ್ರಾನ್ಸ್ ಫಾರ್ಮರ್
  • HTC ಡಿಸೈರ್ ಫಅ

ವಾಟ್ಸಾಪ್ ತನ್ನ ಬಳಕೆದಾರರಿಗೆ ಸಮಯಕ್ಕಿಂತ ಮುಂಚಿತವಾಗಿಯೇ ಸೂಚನೆಯನ್ನು ನೀಡುತ್ತದೆ. ಹೊಸ ಅಪ್ಡೇಟ್‌ ಮಾಡಲು ಹಲವು ಬಾರಿ ನೆನಪಿಸುತ್ತದೆ. ಸಾಧನವನ್ನು ನವೀಕರಣ ಮಾಡದಿದ್ದರೆ ಇನ್ನು ಆ ಫೋನ್‌ ನಲ್ಲಿ ವಾಟ್ಸಾಪ್ ತನ್ನ ಕೆಲಸವನ್ನು ಮಾಡುವುದಿಲ್ಲ. ಅಂದರೆ ಗ್ರಾಹರರು ಆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಆಗುವುದಿಲ್ಲ.

Leave A Reply

Your email address will not be published.

error: Content is protected !!