ರಿಪ್ಪನ್‌ಪೇಟೆ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ, ಡಿಹೆಚ್‌ಓರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬೇಳೂರು

0 633

ರಿಪ್ಪನ್‌ಪೇಟೆ: ರಾತ್ರಿ ಪಾಳಿಯಲ್ಲಿ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತೆಯರು ಯಾರು ಇಲ್ಲದೆ ಮಹಿಳೆಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆಂಬ ದೂರಿನನ್ವಯ ಶಾಸಕ ಗೋಪಾಲಕೃಷ್ಣ ಬೇಳೂರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡುವ ಮೂಲಕ ಡಿ.ಹೆಚ್.ಓ ರವರನ್ನು ತರಾಟೆಗೆ ತಗೆದುಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ತುರ್ತಾಗಿ ಏನಾದರೂ ಅವಘಡಗಳು ಸಂಭವಿಸಿದಾಗ ತಕ್ಷಣ ಅಸ್ಪತ್ರೆಗೆ ತರುವುದು ಅದರೆ ಇಲ್ಲಿನ ಪ್ರಾಥಮಿಕ ಅರೋಗ್ಯ ಕೆಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಅಸ್ಪತ್ರೆಯಲ್ಲಿ ಇಲ್ಲದೇ ಇದ್ದು ಅಪಘಾತ ಅವಘಡಗಳಿಗೆ ತುತ್ತಾಗಿರುವ ರೋಗಿಗಳನ್ನು ಸುಮಾರು 40 ಕಿ.ಮೀ.ದೂರದ ಶಿವಮೊಗ್ಗ ತೀರ್ಥಹಳ್ಳಿ ಇಲ್ಲವೇ ದೂರದ ಮಣಿಪಾಲ, ಮಂಗಳೂರಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ವೈದ್ಯಾಧಿಕಾರಿಗಳು ದೂರದ ಶಿವಮೊಗ್ಗ ಜಿಲ್ಲಾ ಕೆಂದ್ರದದಿಂದ ಓಡಾಡುತ್ತಿದ್ದು ಕೇಂದ್ರ ಸ್ಥಾನದಲ್ಲಿಲ್ಲದೇ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಿದೆ. ಈ ಬಗ್ಗೆ ಸಾಕಷ್ಟು ಭಾರಿ ಸಂಬಂಧಿಸಿದವರ ಗಮನಕ್ಕೆ ತರಲಾದರೂ ಕೂಡಾ ಎರಡು ಮೂರು ದಿನ ಸರಿಯಾಗಿ ಮತ್ತೆ ಹಳೇ ಗಂಡನ ಪಾದವೇ ಗತಿಯಂಬತಾಗಿ ಅಧಿಕಾರಿಗಳು ಅಸ್ಪತ್ರೆಯ ಕಡೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂಬುದಕ್ಕೆ ರಿಪ್ಪನ್‌ಪೇಟೆ ಆಸ್ಪತ್ರೆಯ ಸಾಕ್ಷಿಯಾಗಿದೆ.

ಆರೋಗ್ಯ ಕಾರ್ಯಕರ್ತೆಯರು ಮತ್ತು ವೈದ್ಯಾಧಿಕಾರಿಗಳು ಎಲ್ಲರೂ ಹಗಲು ಮಾತ್ರ ಇರುತ್ತಾರೆ ರಾತ್ರಿಯಾಯಿತ್ತೆಂದರೆ ಆಸ್ಪತ್ರೆ ಖಾಲಿ… ಖಾಲಿ…. ತುರ್ತಾಗಿ ಆಪಘಾತ ಇನ್ನಿತರ ಅವಘಡಗಳು ಸಂಭವಿಸಿದರೆ ರೋಗಿಗಳು ಇಹಲೋಕಕ್ಕೆ ಹೋಗಲು ಸಾಕು ಈ ಆಸ್ಪತ್ರೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ರವೀಂದ್ರ ಕೆರೆಹಳ್ಳಿ, ಆಶೀಫ್‌ಭಾಷಾ, ಗಣಪತಿ, ಪ್ರಕಾಶ ಪಾಲೇಕರ್, ಹೆಚ್.ಎನ್.ಉಮೇಶ್, ಶ್ರೀಧರ, ರಮೇಶ, ಉಮಾಕರ, ಉಂಡಗೋಡು ನಾಗಪ್ಪ, ಚಂದ್ರಶೇಖರ ಮಳವಳ್ಳಿ, ಮಂಜುನಾಥ ಮಳವಳ್ಳಿ, ಲೇಖನ, ಶಿಲ್ಪಾ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!