ಹೊಸನಗರ ಶಾಸಕರ ಮಾದರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ | ಪೋಷಕರು ಖಾಸಗಿ ಶಾಲೆಗಳತ್ತಾ ಮುಖ ಮಾಡುತ್ತಿರುವುದು ಬೇಸರದ ಸಂಗತಿ ; ಬಿಇಒ ಕೃಷ್ಣಮೂರ್ತಿ

0 382

ಹೊಸನಗರ: ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವರ್ಗಗಳಿವೆ ಮಕ್ಕಳಿಗೆ ಸುಸಂಸ್ಕೃತವಾದ ನೀತಿ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದರೂ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತಾ ಮುಖ ಮಾಡುತ್ತಿರುವುದು ಬೇಸರದ ಸಂಗತಿಯೆಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿಯವರು ಹೇಳಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಶಾಸಕರ ಮಾದರಿ ಪ್ರಾಥಮಿಕ ಬಾಲಕಿಯರ ಪ್ರಾಥಮಿಕ ಪಾಠ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯೆಂದರೇ ಜನರಲ್ಲಿ ಕೀಳಿರಿಮೆ ಇದೆ ಅದನ್ನು ಹೊಗಲಾಡಿಸುವ ದೃಷ್ಠಿಯಿಂದ ಸರ್ಕಾರ ಮಕ್ಕಳಿಗೆ ಪಠ್ಯಪುಸ್ತಕ, ಶೂ, ಬೆಳಿಗ್ಗೆ ಹಾಲು ಮಧ್ಯಾಹ್ನ ಬಿಸಿಯೂಟ, ವಾರಕ್ಕೆ ಎರಡು ದಿನ ಪೌಷ್ಠಿಕಾಂಶವುಳ್ಳ ಮೊಟ್ಟೆ, ಚಿಕ್ಕಿಗಳನ್ನು ನೀಡುವುದರ ಜೊತೆಗೆ ಎಲ್ಲ ಸೌಲಭ್ಯಗಳನ್ನು ನೀಡಿದರೂ ಪೋಷಕ ವರ್ಗ ಸರ್ಕಾರಿ ಶಾಲೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಇದರ ಜೊತೆಗೆ ಮಕ್ಕಳ ಕಲಿಕೆಗಾಗಿ ಇಂಗ್ಲೀಷ್ ಮಾಧ್ಯಮವನ್ನು ಕಲಿಸಲಾಗುತ್ತಿದೆ ಸರ್ಕಾರಿ ಶಾಲೆಯಲ್ಲಿ ಓದಿರುವ ಮಕ್ಕಳು ಅನೇಕ ಪದವಿ ಪಡೆಯುವುದರ ಜೊತೆಗೆ ದೊಡ್ಡ-ದೊಡ್ಡ ಹುದ್ದೆಯಲ್ಲಿದ್ದಾರೆ ಈ ವರ್ಷ ನಮ್ಮ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇವೆ. ಸರ್ಕಾರಿ ಶಾಲೆಗೆ ಕಳುಹಿಸುವುದರಿಂದ ಮಕ್ಕಳ ಪೋಷಕರಿಗೆ ಹಣ ಉಳಿತಾಯವಾಗುತ್ತದೆ ಎಲ್ಲರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದರ ಜೊತೆಗೆ ಸರ್ಕಾರಿ ಶಾಲೆ ಉಳಿಸುವ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದರು.

ಸರ್ಕಾರಿ ಬಾಲಕಿಯರ ಪ್ರಾಥಮಿಕ ಪಾಠ ಶಾಲೆಯ ಪ್ರವೇಶದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಕೋಟೆ ಸಯ್ಯದ್‌, ಪ್ರತಿಯೊಬ್ಬರಿಗೂ ಒಂದು ಗುರಿ ಮುಖ್ಯ ಗುರಿಯಿಲ್ಲದಿದ್ದರೇ ಮನಷ್ಯ ಬದುಕಿದ್ದರೂ ಪ್ರಯೋಜನವಿಲ್ಲ ಗುರಿ ತಲುಪಬೇಕಾದರೆ ಸಹನೆ, ಪ್ರೀತಿ ವಿಶ್ವಾಸ ಹಾಗೂ ಸಾಧನೆ ಮುಖ್ಯ ಯಾರು ಗುರಿ ಹಿಡಿದು ಹಠ ಸಾಧಿಸಿ ಅದರಲ್ಲಿ ಉತ್ತೀರ್ಣರಾಗುತ್ತಾರೂ ಅಂಥವರು ಈ ದೇಶದ ಅಸ್ತಿಯಾಗಿ ಹೊರಹೊಮ್ಮುತ್ತಾರೆ ಇದಕ್ಕೆ ಸ್ವಾಮಿ ವಿವೇಕಾನಂದರವರೇ ಸಾಕ್ಷಿಯಾಗಿದ್ದಾರೆ. ಇವರ ಛಲದಿಂದ ಅವರ ಸಾಧನೆಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು.

ದಾನಿಗಳು ಪೋಷಕವರ್ಗ ಜೊತೆಗಿದ್ದರೆ ಸರ್ಕಾರಿ ಶಾಲೆ ಉಳಿಸಲು ಸಾಧ್ಯ:
ಸುಮಾರು 12 ವರ್ಷಗಳ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸುಮಾರು 120 ಜನ ವಿದ್ಯಾರ್ಥಿಗಳು ಓದುತ್ತಿದ್ದರು ಆದರೆ ಈಗ ಇದೇ ಶಾಲೆ ಸರ್ಕಾರಿ ಶಾಲೆಯಲ್ಲಿ 420 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ 12 ವರ್ಷಗಳ ಕಾಲಾವಧಿಯಲ್ಲಿ ಶಿಕ್ಷಕರ ಕೊರತೆ ಕೊಠಡಿಗಳ ಕೊರತೆಗಳಿದ್ದರೂ ಇವುಗಳನ್ನು ಗೌರವ ಶಿಕ್ಷಕರನ್ನು ಇಟ್ಟು ಶಾಲೆ ನಡೆಸಲು ಯಶಸ್ವಿಯಾಗಿದ್ದೇವೆ. ಎಲ್‌ಕೆಜಿ, ಯುಕೆಜಿ, ಇಂಗ್ಲೀಷ್ ಮಾಧ್ಯಮಗಳನ್ನು ತೆರೆಯಲು ನಮ್ಮ ಶಾಲೆಗಳ ದಾನಿಗಳ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಬರಲು-ಹೋಗಲು ಬಸ್ ವ್ಯವಸ್ಥೆ ಆಟೋರಿಕ್ಷಾ ವ್ಯವಸ್ಥೆಗಳನ್ನು ಮಾಡಲಾಗಿದ್ದು ಯಾವುದೇ ಖಾಸಗಿ ಶಾಲೆಗಳಿಗಿಂತ ನಮ್ಮ ಶಾಲೆ ಕಡಿಮೆಯಿಲ್ಲದಂತೆ ನೋಡಿಕೊಂಡಿದ್ದೇವೆ. ಇಷ್ಟು ಉತ್ತಮ ಶಾಲೆ ಎನಿಸಿಕೊಳ್ಳಲು ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳು, ದಾನಿಗಳು ಶಾಲೆಯ ಪೋಷಕ ವರ್ಗ ಹಾಗೂ ಎಸ್‌ಡಿಎಂಸಿ ಸದಸ್ಯರ ಕೊಡುಗೆ ಆಪಾರವಾಗಿದ್ದು ಅವರ ಮುಂದಾಳತ್ವದ ಗುಣದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಈ ಶಾಲೆಗೆ ಇಲ್ಲಿಯವರೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳೆಂದು ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್‌ ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ವೀರಾನಾಯ್ಕರವರನ್ನು ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು‌. ಬೆಳಿಗ್ಗೆ ಹೊಸನಗರ ಪಟ್ಟಣದ ಬೀದಿಗಳಲ್ಲಿ ಸ್ವಚ್ಚತಾ ಸಂದೇಶ ಸಾರುವ ಮಕ್ಕಳ ಜಾಥಾ, ಮಕ್ಕಳ ಸಂತೆ ಇತ್ಯಾದಿ ಕಾರ್ಯಕ್ರಮದ ಜೊತೆಗೆ ಮಧ್ಯಾಹ್ನ ಮಕ್ಕಳ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಾಯಂದಿರು ಉಳಿಸುವ ಕಾರ್ಯಕ್ರಮ ಎಲ್ಲರ ಮನಸ್ಸಿನಲ್ಲಿ ತಾಯಿ ಮಕ್ಕಳ ಸಂಬಂಧ ಹೇಗಿದೆ ಎಂಬುದು ತೋರಿಸುವಂತಿತ್ತು‌.

ದೈಹಿಕ ಶಿಕ್ಷಣಾಧಿಕಾರಿ ಬಾಲಚಂದ್ರಪ್ಪ, ಕರಿಬಸಪ್ಪ, ರೋಹಿಣಿ, ಜಯಲಕ್ಷ್ಮಿ, ರಹಮತ್, ನಾಸೀರ್, ವೀಣಾ, ಸುಜಾತ, ಪವಿತ್ರ, ಲಕ್ಷ್ಮಿ, ಶೈಲಜಾ, ಗೌತಮ್ ಕುಮಾರಸ್ವಾಮಿ, ಪ್ರದೀಪ್ ಕುಮಾರ್, ಸತ್ಯನಾರಾಯಣ ವಿ, ರಾಘವೇಂದ್ರ ಹೆಚ್.ಜಿ, ಮುಖ್ಯ ಶಿಕ್ಷಕ ಹರೀಶ್, ಮಂಜುನಾಥ, ಚಂದ್ರಶೇಖರ, ರಮೇಶ್, ವಿಶ್ವನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!