ಮಲೆನಾಡಿನಲ್ಲಿ ಬಿತ್ತು ವರ್ಷದ ಮೊದಲ ಮಳೆ

0 1,193

ಹೊಸನಗರ : ಪ್ರಸ್ತುತ ಬೆಳಗಿನಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಬುಧವಾರ ರಾತ್ರಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ (Shivamogga) ಜಿಲ್ಲೆಯ ಹಲವು ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ (Heavy Rain) ಸುರಿಯುವ ಮೂಲಕ ಈ ವರ್ಷದ ಮೊದಲ ಮಳೆ ಹನಿ ಭೂಮಿಯನ್ನು ಸ್ಪರ್ಶಿಸಿ ಅಚ್ಚರಿ ಮೂಡಿಸಿದ್ದು,‌ ಬೇಸಿಗೆಯ ಜಳಕ್ಕೆ ಬೇಸತ್ತಿದ್ದ ಜನರು ಮಳೆ ಸುರಿದು ವಾತಾವರಣ ತಂಪಾದ ಕಾರಣ ಖುಷಿಗೊಂಡಿದ್ದಾರೆ.

ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ತಡರಾತ್ರಿ 2:30ರ ಸುಮಾರಿಗೆ ಹೊಸನಗರ ತಾಲೂಕಿನ ಹಲವೆಡೆ ಆರಂಭವಾದ ಮಳೆ ಹೊಸನಗರ, ನಗರ, ನಿಟ್ಟೂರು, ರಿಪ್ಪನ್‌ಪೇಟೆ, ಹುಂಚ, ಕೋಡೂರು, ಗರ್ತಿಕೆರೆ ಭಾಗಗಳಲ್ಲಿ ಸುರಿದಿದೆ. ಇಂದು ಬೆಳಗ್ಗೆ ಸಹ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆ ಬೀಳುತ್ತಿದೆ‌.

ಇನ್ನೂ ಕಾಫಿ, ಕಾಳುಮೆಣಸು, ಅಡಿಕೆ, ಭತ್ತದ ಫಸಲು ಕಟಾವು ಕಾರ್ಯ ನಡೆಯುತ್ತಿದ್ದು ಒಂದೆಡೆ ಮಳೆ ವರವಾದರೆ ಮತ್ತೊಂದೆಡೆ ಶಾಪವಾಗಿ ಪರಿಣಮಿಸಿದೆ.

Leave A Reply

Your email address will not be published.

error: Content is protected !!