ನಮ್ಮ ಗ್ಯಾರಂಟಿಗೆ 10 ವರ್ಷದ ವಾರಂಟಿ ಮಾಡು ಎಂದು ಬೇಡಿಕೊಳ್ಳಲು ಶಾರದೆ ನೆಲೆಗೆ ಬಂದಿದ್ದೇನೆ ; ಡಿಕೆಶಿ

0 349

ಶೃಂಗೇರಿ ; ಪಟ್ಟಣಕ್ಕೆ ಮಂಗಳವಾರ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಗದ್ಗರು ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರೂ ಅವರ ಧರ್ಮದ ಬಗ್ಗೆ ನಂಬಿಕೆ ಇಟ್ಕೊಂಡು ಬದುಕಬೇಕು. ಎಲ್ಲರೂ ಮಾಡೋದು ಶಾಂತಿ ಹಾಗೂ ನೆಮ್ಮದಿಗೋಸ್ಕರ ನಾನು ಧರ್ಮಸ್ಥಳ, ಶಾರದಾಂಬೆ, ಕೊಲ್ಲೂರು, ವಿನಯ್‌ಗುರೂಜಿ, ಕುಕ್ಕೆಸುಬ್ರಹ್ಮಣ್ಯ, ಇಡಗುಂಜಿ, ಮೈಸೂರು ದೇವಾಲಯಕ್ಕೆ ಹೋಗುತ್ತೇನೆ ಎಂದರು.

ಎಲ್ಲರ ಆಶೀರ್ವಾದ ಪಡೆದು ನನ್ನ ಧರ್ಮದ ಯುದ್ಧ ಆರಂಭವಾಗುತ್ತದೆ. ಪ್ರಯತ್ನ ವಿಫಲವಾಗಬಹುದು, ಆದರೆ, ಪ್ರಾರ್ಥನೆ ವಿಫಲವಾಗಲ್ಲ ಪ್ರಾರ್ಥನೆಗೆ ಖಂಡಿತಾ ಫಲ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿ, ನನ್ನ, ಪಕ್ಷ, ಸರ್ಕಾರ, ಜನರ ಪರವಾಗಿ ನಾಡು ಸುಭಿಕ್ಷವಾಗಿ ಒಳ್ಳೆ ಆಡಳಿತ ಮಾಡುವ ಶಕ್ತಿಕೊಟ್ಟಿದ್ದಾರೆ, ಎಲ್ಲಾ ದೇವತೆಗಳು ನಾವು ನುಡಿದದ್ದನ್ನು ನಡೆಸಿಕೊಟ್ಟಿದ್ದಾರೆ ಇದಕ್ಕಿಂತ ನಮಗೆ ಇನ್ನೇನು ಭಾಗ್ಯ ಬೇಕು ಇವೆಲ್ಲ ನಮ್ಮ ಪ್ರಾರ್ಥನೆಯ ಫಲವೆಂದು ಹೇಳಿದರು.

ನಮ್ಮ 5 ಗ್ಯಾರಂಟಿ 5 ವರ್ಷದ ವಾರಂಟಿ, ಫ್ಯಾನ್, ಕುಕ್ಕರ್ ಗೆ ಒಂದು ವರ್ಷ ವಾರಂಟಿ ಕೊಡುತ್ತಾರೆ. ನಮಗೆ ಜನ ಕೊಟ್ಟಿರೋದು 5 ವರ್ಷದ ವಾರಂಟಿ ಹೇಳಿ, ನಾಡಿನ ಜನರು ನೀಡಿರುವ 5 ವರ್ಷದ ವಾರಂಟಿಯನ್ನು 10 ವರ್ಷದ ವಾರಂಟಿ ಮಾಡು ಎಂದು ಬೇಡಿಕೊಳ್ಳಲು ಶಾರದೆನೆಲೆಗೆ ಬಂದಿದ್ದೇನೆಂದು ತಿಳಿಸಿ, ನಮ್ಮ 5 ಗ್ಯಾರಂಟಿಗೆ ಬಜೆಟ್‌ನಲ್ಲಿ ಹಣವಿಟ್ಟು ಜನರ ಸೇವೆಮಾಡುವ ಭಾಗ್ಯವನ್ನು ಜನರು ಕೊಟ್ಟಿದ್ದಾರೆ. ನಿರಂತರವಾಗಿ ಕಾಪಾಡಿಕೊಂಡು ಹೋಗಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆಂದು ಉತ್ತರಿಸಿದರು.

ಶಿವರಾಜ್ ತಂಗಡಗಿ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿ, ಹೊಡಿ, ಬಡಿ, ಕಪಾಳಕ್ಕೆ ಹೊಡಿ ಅಂತ ನಾಡ ಭಾಷೆಯಲ್ಲಿ ಹೇಳಿರಬಹುದು ಅಷ್ಟೆ. ಅದೇನು ದೊಡ್ಡದಲ್ಲ, ತಂಗಡಗಿ ಅವರನ್ನು ಲೀಡರ್ ಮಾಡುತ್ತಿದ್ದಾರೆ. ಮಾಡಲಿ ಬಿಡಿ ನಾನು ರಾಜ್ಯವನ್ನು ಮಾತನಾಡುತ್ತೇನೆ, ಗ್ರಾಮಾಂತರ ಬಗ್ಗೆ ಮಾತನಾಡುವುದಿಲ್ಲವೆಂದರು.

ಗ್ರಾಮಾಂತರದಲ್ಲಿ ದೇವೇಗೌಡರ ಸೊಸೆ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ, ಇದೇ ಸಿದ್ದರಾಮಯ್ಯನವರ ಸರ್ಕಾರವಿತ್ತು. ಸುರೇಶ್ ಸೇವೆ ಪ್ರತಿ ಪಂಚಾಯಿತಿಗೆ ಮೆಂಬರ್ ಇದ್ದಂತೆ. ಸುರೇಶ್ ಪ್ರತಿ ಮನೆಗೂ ಗೊತ್ತು, ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆಂದು ಉತ್ತರಿಸಿದರು.

ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿರುವ ಕುರಿತು ಪ್ರತಿಕ್ರಿಯಿಸಿ, ಅದು ಅವರ ಪಾರ್ಟಿ ವಿಚಾರ ಅವರ ಆಯ್ಕೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಚಿಕ್ಕ ಬಳ್ಳಾಪುರ, ಹಾಸನ ಎಲ್ಲಿಯಾದರೂ ಸ್ಪರ್ಧಿಸಲಿ 2 ಪಾರ್ಟಿ ಸೇರಿ ತೀರ್ಮಾನ ಮಾಡಿದ್ದಾರೆ ಅವರಿಗೆ ಅನುಕೂಲವಾಗುವ ಕಡೆ ನಿಲ್ಲಲಿ.,ಈಗ ನಾವು ಏಕೆ ಆ ವಿಷಯ ಮಾತನಾಡಲು ಹೋಗೋಣವೆಂದರು.

Leave A Reply

Your email address will not be published.

error: Content is protected !!