ಹೊಸನಗರ ; ಪ.ಪಂ. ವ್ಯಾಪ್ತಿಯಲ್ಲಿ ನಲ್ಲಿ ನೀರಿನ ಕಂದಾಯ ಕಡಿಮೆ ಮಾಡಿ ಬಡವರನ್ನು ಉಳಿಸಿ

0 39


ಹೊಸನಗರ: ಇಲ್ಲಿನ ಪಟ್ಟಣ ಪಂಚಾಯತಿ ಮಟ್ಟದಲ್ಲಿ ಸುಮಾರು 1600 ಸಾವಿರ ಮನೆಗಳಿವೆ ಅದರಲ್ಲಿ ಸುಮಾರು 1149 ಮನೆಗಳಿಗೆ ಪಟ್ಟಣ ಪಂಚಾಯಿತಿಯಿಂದ ನಲ್ಲಿಯ ನೀರಿನ ಕನೆಕ್ಷನ್ ಪಡೆದಿದ್ದು ಪ್ರತಿ ವರ್ಷ 1800 ರೂಪಾಯಿಗಳನ್ನು ನೀರಿನ ಕಂದಾಯದ ರೂಪದಲ್ಲಿ ಹಣ ಪಟ್ಟಣ ಪಂಚಾಯಿತಿಗೆ ಸಂದಾಯವಾಗುತ್ತಿದೆ. ಇಷ್ಟು ವರ್ಷ ಹೇಗೋ ಕಳೆದು ಹೋಗಿದೆ ಆದರೆ ಈ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿಂದ 11 ವಾರ್ಡ್‌ಗಳಿಗೆ ಎರಡು ದಿನಕ್ಕೂಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಹಾಗೂ 11 ವಾರ್ಡ್ ಸದಸ್ಯರನ್ನು ಕೇಳಿದರೆ ಹೊಳೆಯಲ್ಲಿ ನೀರು ಇಲ್ಲದ ಕಾರಣ 11 ವಾರ್ಡ್‌ಗಳಿಗೆ ನೀರಿನ ಕೊರತೆ ಇರುವುದರಿಂದ ಎರಡು ದಿನಕ್ಕೂಮ್ಮೆ ವಾರ್ಡ್‌ಗಳಿಗೆ ನೀರು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ ಇದರ ಜೊತೆಗೆ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ.

ವಿದ್ಯುತ್ ಕಣ್ಣಾಮುಚ್ಚಾಲೆಯಾದ ದಿನ ನಲ್ಲಿಯಲ್ಲಿ ನೀರು ಬರುವುದಿಲ್ಲ. ಹೊಸನಗರ ಪಟ್ಟಣದಲ್ಲಿ ನೀರಿನ ಸಮಸ್ಯೆ ಉದ್ಬವವಾಗುತ್ತಿದ್ದು ಮಳೆಗಾಲವೂ ಆರಂಭವಾಗದೇ ಇರುವುದರಿಂದ ಮುಂದಿನ ದಿನದಲ್ಲಿ ಪಟ್ಟಣದಲ್ಲಿ ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶನವಾದರೂ ಆಶ್ಚರ್ಯಪಡಬೇಕಾಗಿಲ್ಲ.

ಹೊಸನಗರ ಪಟ್ಟಣದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ವಾಸಿಸುತ್ತಿರುವುದರಿಂದ ಒಂದು ಹೊತ್ತು ಊಟ ಮಾಡಲು ಪರದಾಟ ನಡೆಸುತ್ತಿರುವುದರಿಂದ ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಪಟ್ಟಣ ಪಂಚಾಯತಿಯ ಅಧ್ಯಕ್ಷ, ಸದಸ್ಯರುಗಳು ಹೊಸನಗರ ಪಟ್ಟಣದ ಜನತೆಯ ಪರವಾಗಿ ನಿಂತು ತಿಂಗಳಿಗೆ 14-15ದಿನಗಳು ಮಾತ್ರ ನಲ್ಲಿಯ ನೀರು ಸರಬರಾಜು ಮಾಡುತ್ತಿರುವುದರಿಂದ ಮೂರು ತಿಂಗಳ ಮಟ್ಟಿಗೆ ಅರ್ಧ ಅಂದರೆ ತಿಂಗಳಿಗೆ 90 ರೂಪಾಯಿಗಳನ್ನು ಪಡೆಯಬೇಕೆಂದು ಪಟ್ಟಣ ಪಂಚಾಯತಿಗೆ ಸಾರ್ವಜನಿಕರು ಈ ಮೂಲಕ ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!