ನರೇಂದ್ರ ಮೋದಿ ಮತ್ತು ಹಿಂದುಳಿದ ವರ್ಗಕ್ಕೆ ರಾಹುಲ್ ಗಾಂಧಿ ಟೀಕೆ, ಹೊಸನಗರದಲ್ಲಿ ಓಬಿಸಿಯಿಂದ ಪ್ರತಿಭಟನೆ ಮನವಿ ಸಲ್ಲಿಕೆ

0 639

ಹೊಸನಗರ: ಪ್ರಧಾನಿ ನರೇಂದ್ರ ಮೋದಿಯವರು ಓಬಿಸಿ ಪಟ್ಟಿಯಲ್ಲಿಲ್ಲ ಎಂದು ಅವಮಾನಿಸುವ ಭರದಲ್ಲಿ ಹಿಂದುಳಿದ ವರ್ಗಕ್ಕೆ ಅವಮಾನಿಸಿದ್ದಾರೆ ಇವರು ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹಾಗೂ ಹಿಂದುಳಿದ ವರ್ಗದವರ ಬಳಿ ಕ್ಷಮೆಯಾಚಿಸಬೇಕು ಮತ್ತು ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಿ ಸೂಕ್ತ ಶಿಕ್ಷೆ ಜಾರಿ ಮಾಡಬೇಕೆಂದು ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಎನ್.ಸುಧಾಕರ್‌ರವರ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಎನ್.ಸುಧಾಕರ್‌, ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಇಲ್ಲವಾದರೇ ನಮ್ಮ ಹೋರಾಟ ನಿರಂತರವಾಗಿರುತ್ತದೆ ರಾಹುಲ್ ಗಾಂದಿಹಯವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಆದರೆ, ಹಿಂದುಳಿದ ವರ್ಗ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಕರ್ನಾಟಕದಲ್ಲಿ ಗಾಣಿಗ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿಲ್ಲ ಎಂಬ ಅರ್ಥಹೀನ ಹೇಳಿಕೆ ನೀಡಿದ್ದಾರೆ ತೇಲಿ ಸಮಾಜ ಎಂದರೇ ಕರ್ನಾಟಕದಲ್ಲಿ ಗಾಣಿಗ ಸಮಾಜ ಎಂಬ ಅರ್ಥ ಈ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ ಇಂಥಹ ಸಮಾಜದಿಂದ ಬಂದಂತಹ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬುವುದು ಹೆಮ್ಮೆಪಡುವ ವಿಷಯ. ಆದರೆ, ರಾಹುಲ್ ಅವರು ಇದನ್ನು ತಿಳಿಯದೇ ಅವಹೇಳನ ಮಾಡಿದ್ದಾರೆ ಎಂದು ದೂರಿದರು.

ರಾಹುಲ್ ಗಾಂಧಿ ಮೋದಿಯವರನ್ನು ದೂರುವುದರಿಂದ ಕೇಂದ್ರದಲ್ಲಿ ಸಂಖ್ಯಾಬಲ ದ್ವಿಗುಣವಾಗುತ್ತದೆ ಕೆ.ಎಸ್ ಪ್ರಶಾಂತ್
ರಾಹುಲ್ ಗಾಂಧಿಯವರು ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿಯವರನ್ನು ಪ್ರತಿ ಬಾರಿಯು ದೂರುತ್ತಿದ್ದು ಇವರು ದೂರಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ ಸಂಸದರ ಸಂಖ್ಯಾಬಲ ಹೆಚ್ಚುತ್ತಾ ಸಾಗುತ್ತಿದೆ. ರಾಹುಲ್ ಗಾಂಧಿ ನರೇಂದ್ರ ಮೋದಿಯವರನ್ನು ಬಿಜೆಪಿ ಪಕ್ಷವನ್ನು ದೂರುತ್ತಾ ಸಾಗಲಿ ಆದರೇ ಹಿಂದುಳಿದ ವರ್ಗದವರನ್ನು ದೂರಿರುವ ಬಗ್ಗೆ ನಾವು ಹೋರಾಟ ನಡೆಸುವುದು ಅನಿವಾರ್ಯ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಪ್ರಭಾರಿ ಕೆ.ಎಸ್ ಪ್ರಶಾಂತ್‌ರವರು ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಎನ್.ಆರ್. ದೇವಾನಂದ್, ಗಣಪತಿ ಬಿಳಗೋಡು ಎ.ವಿ ಮಲ್ಲಿಕಾರ್ಜನ್‌ರವರು ರಾಹುಲ್ ಗಾಂಧಿಯ ವಿರುದ್ಧ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರುಗಳಾದ ಶಿವಮೊಗ್ಗ ಪ್ರದೀಪ್, ಶಿಕಾರಿಪುರ ಲಕ್ಷ್ಮಣ ಕೆ.ಹೆಚ್, ರೂಪಾ ಮಾಲತೇಶ್, ಶಿವಮೊಗ್ಗ ವಿಶ್ವನಾಥ್ ಯು.ಹೆಚ್, ಕೆ.ಎನ್ ವಿಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮೇಘರಾಜ್, ಗಾಜನೂರು ಗಿರಿರಾಜ್, ಹೊಸನಗರದ ಓಬಿಸಿ ವರ್ಗದ ಮಂಜುನಾಥ್ ಸಂಜೀವಣ್ಣ, ಸತ್ಯನಾರಾಯಣ ವಿ, ಪಟ್ಟಣ ಪಂಚಾಯತಿ ಸದಸ್ಯ ಗುರುರಾಜ್ ಆರ್, ವಿಜಯಕುಮಾರ್, ನೇರಲೆ ರಮೇಶ್, ಕೃಷ್ಣಮೂರ್ತಿ, ಮಂಡಾನಿ ಮೋಹನ್, ಜಿಲ್ಲಾ ಓಬಿಸಿ ಕಾರ್ಯದರ್ಶಿ ಸತೀಶ ಕಾಲಸಸಿ, ಗುಲಾಬಿ ಮರಿಯಪ್ಪ, ರಾಜಶೇಖರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!