ಹೊಸನಗರ ತಾಲೂಕಿನ ಈ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ ಘೋಷಿಸಲು ಬಿಇಒ ಅನುಮತಿ

0 84

ಹೊಸನಗರ : ತಾಲ್ಲೂಕಿನ‌ ನಗರ ಹೋಬಳಿ ಮತ್ತು ನಿಟ್ಟೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು
ಅಲ್ಲಲ್ಲಿ ಜೋರಾಗಿ ಗಾಳಿ ಸಹ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲು ಬಿಇಒ ಅನುಮತಿ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರೊಂದಿಗೆ ಚರ್ಚಿಸಿರುವ ಅವರು, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಎಸ್ ಡಿ ಎಂ ಸಿ ಮತ್ತು ಶಾಲಾ ಆಡಳಿತ ಮಂಡಳಿ ಹಂತದಲ್ಲಿ ಚರ್ಚಿಸಿ ರಜೆ ನೀಡುವುದು ಅಗತ್ಯ ಎನಿಸಿದಲ್ಲಿ ಕೂಡಲೇ ತೀರ್ಮಾನಿಸಿ ಮುಂದೆ ಶಾಲಾ ದಿನಗಳನ್ನು ಸರಿದೂಗಿಸುವ ಷರತ್ತಿಗೆ ಒಳಪಟ್ಟು ಶನಿವಾರ ರಜೆ ಘೋಷಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!