ದುರ್ಗುಣಗಳು ದೂರವಾಗಿ ಸದ್ಗುಣಗಳು ಸರ್ವರಲ್ಲಿ ಪ್ರಾಪ್ತವಾಗಲಿ ; ಶ್ರೀಗಳು

0 193

ರಿಪ್ಪನ್‌ಪೇಟೆ: ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು. ಮುಂದೆ ನೋಡಿ ಬದುಕಬೇಕು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಮಸರೂರು ಗ್ರಾಮದ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯರು ಅಯೋಜಿಸಲಾದ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಅರ್ಚನೆಯ ಪ್ರಯುಕ್ತವಾಗಿ ಹಮ್ಮಿಕೊಂಡ ಧರ್ಮಸಮಾರಂಭದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಮುಖದಲ್ಲಿ ನಗುವಿರಲಿ. ಹೃದಯದಲ್ಲಿ ಪ್ರೀತಿ ಇರಲಿ. ಜೀವನದಲ್ಲಿ ಒಂದು ಗುರಿ ಇರಲಿ. ಆ ಗುರಿಯನ್ನು ಮುಟ್ಟಲು ಸಮರ್ಥ ಗುರುವನ್ನು ಹೊಂದಬೇಕೆಂದು ತಿಳಿಸಿ, ಶ್ರೀ ವೀರಭದ್ರ ಮಹಾಸ್ವಾಮಿಯ ದುಷ್ಟರ ಸಂಹಾರಕನಾಗಿ ಶ್ರೇಷ್ಟರ ಪರಿಪಾಲಕನಾಗಿದ್ದಾನೆ. ಅಂತಹ ಮಹಿಮಾಶಾಲಿಯ ಕೃಪೆಯಿಂದ ದುರ್ಗುಣಗಳು ದೂರವಾಗಿ ಸದ್ಗುಣಗಳು ಸರ್ವರಲ್ಲಿ ಪ್ರಾಪ್ತವಾಗಲೆಂದು ಆಶಿಸಿದರು.
ಅನುಭವಿಗಳ ಮಾತಿನಂತೆ ಸಂಬಂಧಗಳಿಗೆಂದೂ ಸಹಜ ಸಾವಿಲ್ಲ. ತಿಳುವಳಿಕೆಯ ಕೊರತೆ, ಪ್ರತಿಷ್ಠೆಗಳೇ ಅವುಗಳನ್ನು ಕೊಲ್ಲುತ್ತವೆ. ಆದ್ದರಿಂದ ಗುರುಹಿರಿಯರ ಮಾತಾಪಿತೃಗಳ ಮಾರ್ಗದರ್ಶನದಲ್ಲಿ ಜೀವನವನ್ನು ಸಾಗಿಸುವುದ ಜೊತೆಗೆ ಶ್ರೀ ಗಜದ್ಗುರು ರೇಣುಕಾ ಭಗವತ್ಪಾದರ ದಶಧರ್ಮ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪಾವನವಾದ ಮಾನವ ಜನ್ಮದ ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳಬೇಕೆಂದರು.

ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ಮಸರೂರು ಗ್ರಾಮದ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಕಗ್ಗಲಿ ವಹಿಸಿದ್ದರು. ಸಭೆಯಲ್ಲಿ ಎಂ.ಬಿ.ಗಣೇಶ ಗೌಡ, ಕೋಣೆಹೊಸೂರು ಕುಮಾರಗೌಡ, ಮಸರೂರು ಎಂ.ಆರ್.ಮುರುಗೇಶಪ್ಪಗೌಡ ಉಪಸ್ಥಿತರಿದ್ದರು.

ಸುಧಾಕರ ಬೆನವಳ್ಳಿ ಸ್ವಾಗತಿಸಿದರು. ಕಗ್ಗಲಿ ಪ್ರಕಾಶ ಕಾರ್ಯಕ್ರಮ ನಿರೂಪಿಸಿದರು. ಕೆಂಚನಾಲ ಗಣೇಶ್ ವಂದಿಸಿದರು.

Leave A Reply

Your email address will not be published.

error: Content is protected !!