ಮತದಾರರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ಬೇಳೂರು ತೊಡಗಿದ್ದಾನೆ ; ಹರತಾಳು ಹಾಲಪ್ಪ ಲೇವಡಿ

0 45



ರಿಪ್ಪನ್‌ಪೇಟೆ: ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರೆಸಾರ್ಟ್ ರಾಜಕೀಯ ಮೂಲಕ ಕಣ್ಣೀರು ಹಾಕಿಸಿದರ ಪರಿಣಾಮ ಈಗ ಮತದಾರರ ಮುಂದೆ ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾನೆಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಲೇವಡಿ ಮಾಡಿದರು.


ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ ಎರಡು ಭಾರಿ ಸಾಗರ ಕ್ಷೇತ್ರದಿಂದ ಗೆದ್ದು ವಿಧಾನಸೌಧದಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತದವರು ಈಗ ಗೆದ್ದು ಏನು ಕಡಿದು ಗುಡ್ಡೆ ಹಾಕುತ್ತಾನೆಂಬುದನ್ನು ಮತದಾರರಲ್ಲಿ ನಮ್ಮಪಕ್ಷದ ಕಾರ್ಯಕರ್ತರು ಮನವರಿಕೆ ಮಾಡಬೇಕು ಎಂದರು.


ಕುರುಕ್ಷೇತ್ರ ಯುದ್ದದಲ್ಲಿ ಭೀಷ್ಮನ ಸಾವಿಗೆ ಶ್ರೀಕೃಷ್ಣ ಶಿಖಂಡಿಯನ್ನು ಮುಂದೆ ತಂದು ನಿಲ್ಲಿಸಿದಂತೆ ಈ ಬಾರಿ ಕಾಂಗ್ರೆಸ್ ಸೋಲಿಗೆ ಸಾಗರದಿಂದ ಮಹಿಳೆಯೊಬ್ಬರನ್ನು ಪಕ್ಷಕ್ಕೆ ಕರೆತಂದಿರುವುದಾಗಿ ತಿಳಿಸಿದರು.


ನಮ್ಮ ತಂದೆಯವರು ಬಗ್ಗೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸಭತ್ಯೆಯಿಂದ ನಡೆದುಕೊಳ್ಳದೇ ವಾಹನವನ್ನು ಪುಡಿಪುಡಿ ಮಾಡಿ ಹಲ್ಲೆ ಮಾಡಿದಂತಹ ವ್ಯಕ್ತಿಯನ್ನು ಬೆಂಬಲಿಸುವ ಬದಲು ಪಕ್ಷ ತತ್ವ ಸಿದ್ದಾಂತದ ಮೂಲಕ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿರುವುದಾಗಿ ಹೇಳಿರುವ ರಾಜನಂದಿನಿಯವ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಬೇಳೂರರಿಗಿಲ್ಲ ಎಂದರು.


ಯಡಿಯೂರಪ್ಪ ಶ್ರೀಕೃಷ್ಣನಾದರೆ ಬೊಮ್ಮಯಿ ಅರ್ಜುನನಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೇಂದ್ರದ ಡಬಲ್ ಎಂಜಿನ್ ಮೋದಿ ಸರ್ಕಾರದಂತೆ ಜಿಲ್ಲೆಯಲ್ಲಿ ಜೋಡೆತ್ತುಗಳಾಗಿ ನಾನು ಮತ್ತು ಬಿ.ವೈ.ರಾಘವೇಂದ್ರ ಅಭಿವೃಧ್ಧಿ ಮತ್ತು ಜನಸಾಮಾನ್ಯರ ಪರ ಕರ್ತವ್ಯ ನಿರ್ವಹಿಸಲು ನಮಗೆ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಉತ್ತರಖಂಡ ರಾಜ್ಯದ ಎಂ.ಎಲ್.ಎ ರಾಕೇಶ್‌ನೈನಿವಾಲ್, ಜಿಲ್ಲಾ ಸಂಚಾಲಕ ಜ್ಯೋತಿ ಪ್ರಕಾಶ್, ಜಿಲ್ಲಾ ಬಿಜೆಪಿ ಪ್ರಮುಖ ಹರಿಕೃಷ್ಣ, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು,
ಎನ್.ಸತೀಶ್, ಎಂ.ಎನ್.ಸುಧಾಕರ, ಕೆ.ಬಿ.ಹೂವಪ್ಪ, ಮಹಾಶಕ್ಷಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎ.ಟಿ.ನಾಗರತ್ನ, ಎಂ.ಸುರೇಶ್‌ಸಿಂಗ್, ಆಲವಳ್ಳಿ ವೀರೇಶ್, ನಾಗರತ್ನ ದೇವರಾಜ್, ನಾಗಾರ್ಜುನಸ್ವಾಮಿ, ಸುಧೀಂದ್ರ ಪೂಜಾರಿ ಪಕ್ಷದ ಇನ್ನಿತರ ಮುಖಂಡರು ಹಾಜರಿದ್ದರು.


ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತದೊಂದಿಗೆ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ದಿ ಕಾರ್ಯವನ್ನು ಮೆಚ್ಚಿ ಹಲವು ಪಕ್ಷದ ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು.

Leave A Reply

Your email address will not be published.

error: Content is protected !!