ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಸೇರಿ ಮೆಟಾ ಸೇವೆ ದಿಢೀರ್ ಸ್ಥಗಿತ ! ಬಳಕೆದಾರರ ಪರದಾಟ

0 1,199

ಬೆಂಗಳೂರು : ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಬಳಕೆದಾರರು ಏಕಾಏಕಿ ತಾಂತ್ರಿಕ ಸಮಸ್ಯೆ ಎದುರಿಸಿದ್ದಾರೆ.

ಮೆಟಾ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಫೇಸ್‌ಬುಕ್ , ಮೆಸೇಂಜರ್, ಇನ್‌ಸ್ಟಾಗ್ರಾಂ ಬಳಕೆದಾರರು ಇದೀಗ ಲಾಗಿನ್ ಸಮಸ್ಯೆಯಿಂದ ಪರಾದಾಡುತ್ತಿದ್ದಾರೆ.

ಏಕಾಏಕಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಲಾಗ್ ಔಟ್ ಆಗಿದೆ. ಬಳಿಕ ಹೊಸ ಪಾಸ್‌ವರ್ಡ್ ಸಹಿತಿ ಏನೇ ಮಾಡಿದರೂ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಅಳಲು ತೋಡಿಕೊಂಡಿದ್ದಾರೆ. 

ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಮೆಟಾ ಸೇವೆ ತಾತ್ಕಾಲಿಕ ಸ್ಥಗಿತಗೊಂಡಿದೆ. ಡೌನ್ ಡಿಟೆಕ್ಟರ್ ಡಾಟ್ ಕಾಮ್ ತಾಂತ್ರಿಕ ಸಮಸ್ಯೆ ಕುರಿತು ಮಾಹಿತಿ ನೀಡಿದೆ. ಮೆಟಾದ ಕೆಲ ಸೇವೆಗಳು ಸ್ಥಗಿತಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಬಳಕೆದಾರರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಅನ್ನೋ ಮಾಹಿತಿಯನ್ನು ನೀಡಿದೆ. ಟ್ವಿಟರ್‌ನಲ್ಲಿ ಈ ಕುರಿತು ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

300,000 ಕ್ಕೂ ಹೆಚ್ಚು ಬಳಕೆದಾರರು ಫೇಸ್‌ಬುಕ್ ಸಮಸ್ಯೆ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ. 20,000ಕ್ಕೂ ಹೆಚ್ಚು ಬಳಕೆದಾರರು ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತುದೂರು ನೀಡಿದ್ದಾರೆ. ಮಾರ್ಚ್ 5ರಂದು ಮೆಟಾದ ಫೇಸ್‌ಬುಕ್ ಸೇರಿದಂತೆ ಇತರ ಕೆಲ ಸೇವೆಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ ಅನ್ನೋದನ್ನು ಡೌನ್‌ಡಿಟೆಕ್ಟರ್ ಹೇಳಿದೆ.

ಫೇಸ್‌ಬುಕ್ ಡೌನ್ ಕುರಿತು ಮೆಟಾ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ತಾಂತ್ರಿಕ ಸಮಸ್ಯೆ ಪರಿಹಾರ ಕುರಿತು ಯಾವುದೇ ಮಾಹಿತಿ ಬಹಿರಂವಾಗಿಲ್ಲ. ಆದರೆ ಬಳಕೆದಾರರು ಟ್ರೋಲ್, ಮೀಮ್ಸ್ ಆರಂಭಿಸಿದ್ದಾರೆ. 2024ರ ಅತೀ ದೊಡ್ಡ ಸರ್ವರ್ ಡೌನ್ ಎಂದು ಹೇಳಲಾಗುತ್ತದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಮೆಟಾ ಕೆಲ ಸೇವೆಗಳು ಈ ಮಟ್ಟಿನ ತಾಂತ್ರಿಕ ಸಮಸ್ಯೆ ಎದುರಿಸಿಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಮಾತ್ರಾ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ನುಳಿದ ಸೇವೆಗಳು ತಾತ್ಕಾಲಿಕ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆ ಪರಿಹಾರವಾಗುವ ಸಾಧ್ಯತೆಯನ್ನು ಡೌನ್ ಡಿಟೆಕ್ಟರ್ ನೀಡಿದೆ. 

2023ರಲ್ಲಿ ಟ್ವಿಟರ್ ಕೆಲ ಬಾರಿ ಈ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಬಳಿಕ ಹಲವು ಬಾರಿ ಸರ್ವರ್ ಸಮಸ್ಯೆ ಎದುರಿಸಿತ್ತು. ಪ್ರತಿ ಬಾರಿಯೂ ಮಸ್ಕ್ ಟ್ರೋಲ್ ಆಗಿದ್ದರು. ಆದರೆ ತಕ್ಷಣವೇ ಸಮಸ್ಯೆ ಸರಿಪಡಿಸಲಾಗಿತ್ತು. ಬಳಿಕ ಟ್ವಿಟರ್ ತಾಂತ್ರಿಕ ಸಮಸ್ಯೆ ಎದುರಾಗದಂತೆ ನೋಡಿಕೊಂಡಿದೆ.

Leave A Reply

Your email address will not be published.

error: Content is protected !!