ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣೇಶೋತ್ಸವ ; ಈ ಬಾರಿ ಏನೆಲ್ಲಾ ಕಾರ್ಯಕ್ರಮಗಳಿವೆ?

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇದೇ ಆಗಸ್ಟ್ 27 ರಿಂದ ಸೆಪ್ಟೆಂಬರ್ 6ರ ವರೆಗೆ 11 ದಿನಗಳ ಕಾಲ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿಯವರ 58ನೇ ವರ್ಷದ ಗಣಪತಿ ಪ್ರತಿಷ್ಟಾಪನಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮವನ್ನು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸುಧೀರ್ ಪಿ ಮತ್ತು ಪ್ರಧಾನ ಕಾರ್ಯದರ್ಶಿ ಮುರುಳಿಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಾರ್ಯಕ್ರಮಗಳು :

  • ಆ. 27 ರಂದು ಬುಧವಾರ ಮಧ್ಯಾಹ್ನ 11.30ಕ್ಕೆ ಗಣಪತಿ ಪ್ರತಿಷ್ಟಾಪನಾ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ
  • ಆ. 28 ರಂದು ಗುರುವಾರ ಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಸ್ಥಳೀಯ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
  • ಆ. 29 ರಂದು ಶುಕ್ರವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಗವಟೂರು ಶ್ರೀರಾಮೇಶ್ವರ ಕಲಾ ತಂಡದವರಿಂದ ಮನರಂಜನಾ ಕಾರ್ಯಕ್ರಮ.
  • ಆ.30 ರಂದು ಶನಿವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಬಟ್ಟೆಮಲ್ಲಪ್ಪ ತೀರ್ಥಕುಮಾರ್ ಶಿಕ್ಷಕರ ಸಾರಥ್ಯದಲ್ಲಿ ಹಂಸವೇಣಿ ಕಲಾ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.
  • ಆ. 31 ರಂದು ಭಾನುವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಕೊಪ್ಪ-ಹೊಸನಗರ ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ನೃತ್ಯ ರೂಪಕ.
  • ಸೆ.1 ರಂದು ಸೋಮವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಹೆಸರಾಂತ ಜಾನಪದ ಕಲಾ ತಂಡಗಳಾದ ಬೇಸೂರು ಶ್ರೀ ಬಸವೇಶ್ವರ ಗೆಳೆಯರ ಬಳಗ ಮತ್ತು ಹುಂಚ ಶ್ರೀಮಾರಿಕಾಂಬ ಗೆಳೆಯರ ಬಳಗ ಇವರಿಂದ ಬೆಳ್ಳಿ ಬಳೆ ಕೋಲಾಟ ಸ್ಪರ್ಧೆ.
  • ಸೆ. 2 ರಂದು  ಮಂಗಳವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ  ಶ್ರೀ ಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ವಿದ್ಯಾರ್ಥಿಗಳಿಂದ ಭರತನಾಟ್ಯ.
  • ಸೆ. 3 ರಂದು ಬುಧವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಕುಂದಾಪುರದ ಮನು ಹಂದಾಡಿ ಕಲಾ ತಂಡದವರಿಂದ ನಗೆ ಒಡ್ಡೋಲಗ ಹಾಸ್ಯ ಕಾರ್ಯಕ್ರಮ.
  • ಸೆ. 4 ರಂದು ಗುರುವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ  ಕೋಟೇಶ್ವರ ಕಲಾ ಚಂದನ ನಾಟಕ ತಂಡದವರಿಂದ ಲಾಸ್ಟ್ ವಾರ್ನಿಂಗ್ ಹಾಸ್ಯಮಯ ನಾಟಕ ಪ್ರದರ್ಶನ.
  • ಸೆ.5 ರಂದು ಶುಕ್ರವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಮಂಗಳೂರಿನ ಅರೆಹೊಳೆ ಪ್ರತಿಷ್ಟಾನ ನಂದಗೋಕುಲ ಕಲಾವಿದರುಗಳ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ.
  • ಸೆ. 6 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ  ಶ್ರೀಗಣಪತಿ ವಿಸರ್ಜನಾ ಪೂಜೆ ನಂತರ ಮಧ್ಯಾಹ್ನ 4 ಗಂಟೆಗೆ ರಾಜಬೀದಿ ಉತ್ಸವ ಜರುಗಲಿದೆ.

Leave a Comment