ಶಿವಮೊಗ್ಗ / ಚಿಕ್ಕಮಗಳೂರು ; ಮಳೆ(ಲೆ)ನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಆರಿದ್ರ ಆರ್ಭಟ ಜೋರಾಗಿದೆ.
ಸೋಮವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ರಾಜ್ಯದಲ್ಲೇ ಅತ್ಯಧಿಕ 158 ಮಿ.ಮೀ. ಮಳೆ ದಾಖಲಾಗಿದೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಹೊಸನಗರ – ಹುಲಿಕಲ್ : 158
- ಹೊಸನಗರ – ಮಾಸ್ತಿಕಟ್ಟೆ : 140
- ಹೊಸನಗರ – ಚಕ್ರಾನಗರ : 103
- ಹೊಸನಗರ – ಯಡೂರು : 96
- ಹೊಸನಗರ – ಮಾಣಿ : 90
- ಹೊಸನಗರ – ಸುಳಗೋಡು : 83
- ಹೊಸನಗರ – ಬಿದನೂರುನಗರ : 74
- ಹೊಸನಗರ – ಸಾವೇಹಕ್ಲು : 70
- ತೀರ್ಥಹಳ್ಳಿ – ಹೊನ್ನೇತಾಳು : 60.5
- ತೀರ್ಥಹಳ್ಳಿ – ಮೇಗರವಳ್ಳಿ : 59
- ತೀರ್ಥಹಳ್ಳಿ – ಅರೇಹಳ್ಳಿ : 55.5
- ತೀರ್ಥಹಳ್ಳಿ – ತೀರ್ಥಮತ್ತೂರು : 54.5
- ತೀರ್ಥಹಳ್ಳಿ – ಹೊಸಳ್ಳಿ : 51.5
- ಹೊಸನಗರ – ಮೇಲಿನಬೆಸಿಗೆ : 50.5
- ತೀರ್ಥಹಳ್ಳಿ – ಸಾಲ್ಗಡಿ : 49.5
- ಹೊಸನಗರ – ಹೊಸೂರು (ಸಂಪೆಕಟ್ಟೆ) : 49
- ತೀರ್ಥಹಳ್ಳಿ – ನೆರಟೂರು : 45.5
- ತೀರ್ಥಹಳ್ಳಿ – ಮುಳಬಾಗಿಲು : 45
- ತೀರ್ಥಹಳ್ಳಿ – ಆರಗ 43.5
- ಸಾಗರ – ಕೋಳೂರು : 34.5
- ಹೊಸನಗರ – ಕೋಡೂರು : 34
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಶೃಂಗೇರಿ – ಶೃಂಗೇರಿ : 81.6
- ಶೃಂಗೇರಿ – ಬೇಗಾರ್ : 79
- ಶೃಂಗೇರಿ – ಮೆಣಸೆ : 55.5
- ಶೃಂಗೇರಿ – ಧರೆಕೊಪ್ಪ : 55.5
- ಕೊಪ್ಪ – ಅಗಳಗಂಡಿ : 49
- ಕೊಪ್ಪ – ಹೇರೂರು : 45
- N.R.ಪುರ – ಕರ್ಕೇಶ್ವರ(ಮೇಲ್ಪಾಲ್) : 45
- ಕೊಪ್ಪ – ಕಮ್ಮರಡಿ : 43
- ಕೊಪ್ಪ – ಕೊಪ್ಪ (ಗ್ರಾಮೀಣ) : 42
- ಮೂಡಿಗೆರೆ – ಕಿರುಗುಂದ : 35
- ಕಳಸ – ಹೊರನಾಡು : 31.5
- N.R.ಪುರ – ಆಡುವಳ್ಳಿ (ಗಡಿಗೇಶ್ವರ) : 30
ಲಿಂಗನಮಕ್ಕಿ ಜಲಾಶಯ :
ಲಿಂಗನಮಕ್ಕಿ ಜಲಾಶಯದಲ್ಲಿ ಈ ಬಾರಿ ಕಳೆದ ಬಾರಿಗಿಂತ 31 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದ್ದು ಇಂದು ಬೆಳಗ್ಗೆ 8:00 ಗಂಟೆಗೆ ಜಲಾಶಯದ ನೀರಿನ ಮಟ್ಟ 1775.30 ಅಡಿ ತಲುಪಿದ್ದು ಜಲಾಶಯಕ್ಕೆ 24229 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ 1744.55 ಅಡಿ ನೀರು ದಾಖಲಾಗಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.