Sigandur Bridge: ಮಲೆನಾಡು ತನ್ನ ನೈಸರ್ಗಿಕ ಸೌಂದರ್ಯ ಹಾಗೂ ಪ್ರಾಕೃತಿಕ ಸಂಪತ್ತಿನಿಂದಲೇ ವಿಶ್ವದ ಗಮನ ಸೆಳೆದಿದೆ. ಈ ಮಲೆನಾಡ ಹಚ್ಚ ಹಸಿರು ಪ್ರದೇಶದ ಹೃದಯ ಭಾಗವಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಪ್ರದೇಶಕ್ಕೆ ನಿರ್ಮಾಣವಾಗಿರುವ ಸಿಗಂದೂರು ಸೇತುವೆ,ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಹೆಮ್ಮೆ ತಂದ ಮಹತ್ವದ ಯೋಜನೆ.
430 ಕೋಟಿ ರೂ. ವೆಚ್ಚದಲ್ಲಿ 2.44 ಕಿ.ಮೀ ಉದ್ದದ ಕೇಬಲ್ ಆಧಾರಿತ ಸೇತುವೆ ರೂಪುಗೊಂಡಿದ್ದು, ಇದು ಕರ್ನಾಟಕದ ಅತೀ ಉದ್ದದ ಇನ್‌ಲ್ಯಾಂಡ್ ಕೇಬಲ್ ಸ್ಟೇಡ್ ಬ್ರಿಡ್ಜ್ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡ ಈ ಸೇತುವೆ ಸಂಪರ್ಕದ ನೆಲೆ ರೂಪಿಸುತ್ತಿದೆ. ಇತ್ತೀಚೆಗೆ ಸೇತುವೆಯಲ್ಲಿ ಲೋಡ್ ಟೆಸ್ಟಿಂಗ್ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಸಂಪರ್ಕದ ಹೊಸ ಅಧ್ಯಾಯ
ಈ ಸೇತುವೆಯ ಮೂಲಕ ಶರಾವತಿ ಹಿನ್ನೀರದ ಇತರ ಭಾಗಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದ್ದು, ಇದು ಸ್ಥಳೀಯ ನಾಗರಿಕರಿಗೆ ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೂ ಮಹತ್ವದ ಬದಲಾವಣೆಯಾಗಲಿದೆ.
ಕೃತಜ್ಞತೆ ವ್ಯಕ್ತಪಡಿಸಿದ ಸಂಸದರು
ಈ ಐತಿಹಾಸಿಕ ಯೋಜನೆಯು ದಶಕಗಳಿಂದ ಜನತೆಯ ಕನಸು ಆಗಿದ್ದಿದ್ದು, ಇಂದು ಲೋಕಾರ್ಪಣೆಯ ಸುಸಂದರ್ಭವನ್ನು ಎದುರುನೋಡುತ್ತಿರುವುದು ಸಂತೋಷದ ಸಂಗತಿ. ಈ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಲ್ಲಿ ಪೂಜ್ಯ ತಂದೆಯವರಾದ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಅಮೂಲ್ಯವಾಗಿದೆ. ಅವರ ದೂರದೃಷ್ಟಿ ಹಾಗೂ ನಿರಂತರ ಸಾದ್ಧ್ಯತೆಯ ಶ್ರಮದಿಂದ ಈ ಸೇತುವೆ ಇಂದು ಸಾಕಾರವಾಗುತ್ತಿದೆ.
ಇದೇ ವೇಳೆ, ಈ ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಿ, ಮಲೆನಾಡು ಮತ್ತು ನಾಡಿನ ಸಂಪರ್ಕ ವ್ಯವಸ್ಥೆಗೆ ಬಲವರ್ಧನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಧನ್ಯವಾದಗಳನ್ನ ವ್ಯಕ್ತಪಡಿಸಿದ್ದಾರೆ.
https://www.facebook.com/share/p/12KCh3pCSHo
Read More :ಸಿಗಂದೂರು ಸೇತುವೆಯಲ್ಲಿ ಲೋಡ್ ಟೆಸ್ಟಿಂಗ್ ಪೂರ್ಣ!ಸಂಪರ್ಕದ ಹೊಸ ಅಧ್ಯಾಯದ ಪ್ರಾರಂಭಕ್ಕೆ ಕ್ಷಣಗಣನೆ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.