ಜುಲೈ 14ರಂದು ಸಿಗಂದೂರು ಸೇತುವೆ ಉದ್ಘಾಟನೆ ಈ ಜಾಗದಲ್ಲಿ ನಡೆಯಲಿದೆ

Written by Koushik G K

Updated on:

ಸಾಗರ: ‌ಜುಲೈ 14ರಂದು ಸಿಗಂದೂರಿನ ಸೇತುವೆಯ ಭವ್ಯ ಉದ್ಘಾಟನೆ ನಡೆಯಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಲೋಕಾರ್ಪಣೆ ಮಾಡುವರು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಸಚಿವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆಯೂ ನಡೆಯಲಿದೆ.

ಪ್ರಮುಖ ಯೋಜನೆಗಳು:

  • ₹925 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ – ಸಾಗರದಿಂದ ಮರುಕುಟಿಕದವರೆಗೆ, ಸಾಗರ ಪಟ್ಟಣದ ಬೈಪಾಸ್ ಸೇರಿ ದ್ವಿಪಥ ರಸ್ತೆ ನಿರ್ಮಾಣ.
  • ಈ ಮೂಲಕ ಒಟ್ಟು ₹2056 ಕೋಟಿ ಮೊತ್ತದ ಕಾಮಗಾರಿಗಳು ಜಿಲ್ಲೆಗೆ ಲಭ್ಯವಾಗಿವೆ ಹಾಗೂ ಚುರುಕಾಗಿ ನಡೆಯುತ್ತಿವೆ.

ಅಭಿವೃದ್ಧಿ ಯೋಜನೆಗಳು:

  • ಚಿತ್ರದುರ್ಗ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ (NH-13) ದ್ವಿಪಥ ರಸ್ತೆ ಬಾಕಿ ಭಾಗದ ನಿರ್ಮಾಣಕ್ಕೆ ₹518.93 ಕೋಟಿ.
  • ವಿದ್ಯಾನಗರ ರೈಲ್ವೆ ಅಂಡರ್‌ಪಾಸ್ – ₹48 ಕೋಟಿ ವೆಚ್ಚ.
  • ತೀರ್ಥಹಳ್ಳಿರಸ್ತೆ – ₹96 ಕೋಟಿ.
  • ತುಂಗ ಸೇತುವೆ, ಬೈಪಾಸ್ ರಸ್ತೆ, ಆಗೂಂಬೆ–ಮೇಗರವಳ್ಳಿ ದ್ವಿಪಥ ರಸ್ತೆ – ₹96 ಕೋಟಿ.
  • ಮೂರು ಕಿರು ಸೇತುವೆಗಳು ಹಾಗೂ ಇತರ 16 ಪ್ರಮುಖ ಕಾಮಗಾರಿಗಳು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿವೆ.

ಸಂಸದರು 2022–23ರಲ್ಲಿ ಮಂಜೂರಾದ ಮೂರು ಯೋಜನೆಗಳ ವಿವರ ನೀಡುತ್ತಾ, ಈಗಾಗಲೇ 2024–25 ಸಾಲಿನಲ್ಲಿ ಹಲವಾರು ಕಾಮಗಾರಿಗಳು ಅನುಷ್ಠಾನದಲ್ಲಿರುವುದಾಗಿ ತಿಳಿಸಿದರು.

ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ತುಂಗಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಗಣ್ಯರು ಭಾಗವಹಿಸಿ ನದಿಗೆ ಬಾಗಿನ ಅರ್ಪಿಸಿದರು.

Leave a Comment