ಶಿವಮೊಗ್ಗ

ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನ ಹೆಚ್ಚಿಸಿ ಕೇಂದ್ರದ ಮಹತ್ವದ ಆದೇಶ – ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ:ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಸಹಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿರುವುದು ತೋಟಗಾರಿಕೆ ಕ್ಷೇತ್ರದಲ್ಲಿ ಸಂತಸದ ಸಂಚಲನ ಮೂಡಿಸಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಇದುವರೆಗೆ ಶೇ.50ರ ಸಹಾಯಧನದ ಗರಿಷ್ಠ ಮಿತಿಯು ₹5,000 ಇತ್ತು ಇದೀಗ ಅದನ್ನು ₹40,000 ರವರೆಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಹಾಗೂ ಅತಿಸಣ್ಣ ರೈತರು ಮತ್ತು ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಕಳೆದ ತಿಂಗಳು ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಹಾಯಧನ ಹೆಚ್ಚಳದ ಕುರಿತು ಒತ್ತಾಯವೂ ಮಾಡಲಾಗಿತ್ತು ಎಂದು ಅವರು ಹೇಳಿದರು.

‘ಕೃಷಿ ಯಾಂತ್ರೀಕರಣ ಉಪ ಅಭಿಯಾನ’ದ ಅಡಿಯಲ್ಲಿ ಜಾರಿಗೆ ಬರಲಿದ್ದು, ಈ ಯೋಜನೆಯಡಿ “ಟೆಲಿಸ್ಕೋಪಿಕ್ ಟ್ರೀ-ಪ್ರೊನರ್” ಉಪಕರಣಗಳ ಖರೀದಿಗೆ ಹೆಚ್ಚಿನ ಹಣ ಸಹಾಯಧನವಾಗಿ ದೊರೆಯಲಿದೆ.

ಆಧುನಿಕ ಕೃಷಿಗೆ ಉತ್ತೇಜನ

ಈ ಹೆಚ್ಚಳದಿಂದ ಆಧುನಿಕ ಕೃಷಿ ಉಪಕರಣಗಳನ್ನು ಬೆಳೆಗಾರರು ಸುಲಭವಾಗಿ ಖರೀದಿಸಬಹುದು. ವಿಶೇಷವಾಗಿ ಎತ್ತರದ ಅಡಿಕೆ ಮರಗಳಿಂದ ಸುಲಭವಾಗಿ ಕೊಯ್ಯುವ ಉಪಕರಣಗಳು ಈಗ ರೈತರಿಗೂ ಕೈಗೆಟುಕುವಾಗುತ್ತವೆ. ಈ ತಂತ್ರಜ್ಞಾನ ಬಳಕೆದಿಂದ ಶ್ರಮ, ಸಮಯ ಉಳಿತಾಯವಾಗುವುದರ ಜೊತೆಗೆ ಉತ್ಪಾದನೆಯಲ್ಲೂ ಫಲಿತಾಂಶ ಸುಧಾರಣೆ ಕಾಣಬಹುದಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಫಸಲು ದಾಖಲಾತಿಗೆ ಹೊಸ ಸೌಲಭ್ಯ


Leave a Comment