ಹೊಸನಗರ ; ನಮ್ಮದು ಕೃಷಿ ಪ್ರಧಾನ ದೇಶ. ಅದರೆ ಇಂದಿನ ಪೀಳಿಗೆಗೆ ಭತ್ತ, ರಾಗಿ, ಜೋಳ ಎಂದರೇನು ಎಂದು ಗೊತ್ತಿಲ್ಲ. ಅದನ್ನು ಪರಿಚಯಿಸುವ ಉದ್ದೇಶ ಹಾಗೂ ರೈತರು ಗದ್ದೆಗಳಲ್ಲಿ ಹೇಗೆ ಸಸಿಗಳನ್ನು ನಾಟಿ ಮಾಡುತ್ತಾರೆ. ಯಾವ ಕ್ರಮ ಅನುಸರಿಸುತ್ತಾರೆ. ಯಾವ ರೀತಿ ಭತ್ತದ ಸಸಿಗಳನ್ನು ಗದ್ದೆಗಳಲ್ಲಿ ನಾಟಿ ಮಾಡಬೇಕು ಎಂದು ಕಲಿಸುವ ಉದ್ದೇಶದಿಂದ ಹೊಸನಗರ ತಾಲ್ಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳನ್ನು ಮೇಲಿನಕಲ್ಲುಗುಡ್ಡೆ ಕುಮಾರಗೌಡ ಎಂಬುವರ ಗದ್ದೆಗೆ ಕರೆದುಕೊಂಡು ಹೋಗಿ ಭತ್ತದ ಸಸಿ ನಾಟಿಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕುಮಾರ್ ಆಚಾರ್ಯರವರ ನೇತೃತ್ವದಲ್ಲಿ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗರತ್ನ, ಮುಖ್ಯ ಶಿಕ್ಷಕ ಗುರುಮೂರ್ತಿ, ಪಿಆರ್‌ಪಿ ನಾಗಬೂಷಣ್, ಶಿಕ್ಷಕ ಧರ್ಮಪ್ಪ, ಸುಮಾ, ಜಯಲಕ್ಷ್ಮಿ, ಪತ್ರಕರ್ತ ವಿಜೇಂದ್ರಪ್ರಭು, ಗಣೇಶ ಭಂಡಾರಿ, ಪ್ರಹ್ಲಾದ, ರಫೀ, ರಮೇಶ, ಸುಧೀರ, ರಾಘವೇಂದ್ರ, ಪ್ರವೀಣ್ ಉಲ್ಲಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಹಾಗೂ ಊರಿನ ಸಾರ್ವಜನಿಕರು ಹಾಗೂ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.