ತೀರ್ಥಹಳ್ಳಿ

ತೀರ್ಥಹಳ್ಳಿಯ ಸಹ್ಯಾದ್ರಿ ಸಂಸ್ಥೆಗೆ ಈ ಸಾಲಿನಲ್ಲಿ ರೂ.11 ಕೋಟಿಗೂ ಹೆಚ್ಚು ಲಾಭ: ಬಸವಾನಿ ವಿಜಯದೇವ್

ತೀರ್ಥಹಳ್ಳಿ– ಮಲೆನಾಡಿನ ಪ್ರತಿಷ್ಠಿತ ಸಹ್ಯಾದ್ರಿ ಸಂಸ್ಥೆ 2024-25ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ರೂ.11 ಕೋಟಿ 64 ಲಕ್ಷ 11 ಸಾವಿರ 745 ಲಾಭ ಗಳಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.

ಪಟ್ಟಣದ ಸಹ್ಯಾದ್ರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆಯು ನಿರಂತರವಾಗಿ ಎ ಶ್ರೇಣಿ ಆಡಿಟ್ ವರದಿ ಪಡೆಯುತ್ತಾ ಬಂದಿದ್ದು, ಈ ಸಾಲಿನಲ್ಲಿ ಒಟ್ಟು ವ್ಯವಹಾರ ರೂ.1,475 ಕೋಟಿಗೂ ಹೆಚ್ಚು ತಲುಪಿದೆ ಎಂದರು.

ಸಾಲ-ಠೇವಣಿ ಹಾಗೂ ವಸೂಲಾತಿ ಪ್ರಗತಿ

ಸಂಸ್ಥೆಯು ಸುಮಾರು ರೂ.104 ಕೋಟಿ 54 ಲಕ್ಷ ಠೇವಣಿ ಹೊಂದಿದ್ದು, ರೂ.140 ಕೋಟಿಗೂ ಅಧಿಕ ಸಾಲ ವಿತರಣೆಯಾಗಿದೆ. ಸಾಲ ವಸೂಲಾತಿ ಶೇ.77% ಪ್ರಗತಿಯನ್ನು ದಾಖಲಿಸಿದೆ ಎಂದು ಅವರು ವಿವರಿಸಿದರು.

ವಿಭಾಗವಾರು ಲಾಭದ ವಿವರ

  • ಅಡಿಕೆ ವ್ಯಾಪಾರ: ರೂ.7.89 ಕೋಟಿ
  • ಚೀಟಿ ನಿಧಿ ವಿಭಾಗ: ರೂ.3 ಕೋಟಿ ಹೆಚ್ಚು
  • ಸಹ್ಯಾದ್ರಿ ಫ್ಯೂಯಲ್ಸ್: ರೂ.40 ಲಕ್ಷ ಹೆಚ್ಚು
  • ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಎಮಿಷನ್ ಟೆಸ್ಟ್: ರೂ.6.30 ಲಕ್ಷ
  • ಸರ್ವೋ ಇಂಡಿಯನ್ ಆಯಿಲ್: ರೂ.7.70 ಲಕ್ಷ
  • ಸಹ್ಯಾದ್ರಿ ವಾಟರ್ ಪ್ಲಾಂಟ್: ರೂ.8.29 ಲಕ್ಷ

ಇದರ ಜೊತೆಗೆ, ಸಹಕಾರಿದನಿ ವಾರಪತ್ರಿಕೆ ಮತ್ತು ಸಹ್ಯಾದ್ರಿ ಬಸ್ ಸೇವೆ ಮಲೆನಾಡಿನಲ್ಲಿ ಉತ್ತಮ ಖ್ಯಾತಿ ಗಳಿಸಿರುವುದಾಗಿ ಅವರು ಹೇಳಿದರು.

ಸದಸ್ಯರಿಗೆ ಡಿವಿಡೆಂಡ್ ಘೋಷಣೆ

ಈ ಸಾಲಿನಲ್ಲಿಯೂ ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಬಸವಾನಿ ವಿಜಯದೇವ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಉಪಸ್ಥಿತರಿದ್ದರು.

Leave a Comment