ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ; ಶ್ರೀನಿವಾಸ್ ರೆಡ್ಡಿ

Written by Mahesha Hindlemane

Published on:

ಹೊಸನಗರ ; ಸರ್ಕಾರಿ ಅಧಿಕಾರಿಗಳು ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿ ತಾವು ಬೇರೆ ಊರಿಗೆ ವರ್ಗಾವಣೆಯಾಗಿ ಹೋದರೂ ನಿಮ್ಮ ಹೆಸರು ಕೊನೆಯವರೆಗೆ ಉಳಿಯುವಂತೆ ಸೇವೆ ಸಲ್ಲಿಸಿ ಎಂದು ಹೊಸನಗರ ತಾಲ್ಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಯನಗರ ಮೇಲಿನಬೇಸಿಗೆ ಗ್ರಾಮ ಪಂಚಾಯತಿಯಲ್ಲಿ ಸುಮಾರು 11 ವರ್ಷ ಗುಮಾಸ್ಥೆಯಾಗಿ ಸೇವೆ ಸಲ್ಲಿಸಿದ ಶಮೀರಬಾನು ಎರಡು ವರ್ಷಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಪವನ್ ಹಾಗೂ 9 ತಿಂಗಳುಗಳ ಕಾಲ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವಿಶ್ವನಾಥ್‌ರವರು ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡಿದ್ದು ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಬಿಳ್ಕೊಡುವ ಸಂದರ್ಭದಲ್ಲಿ ಮಾತನಾಡಿದರು.

ರಾಜಕೀಯ ನಾಯಕರ ಪದವಿ ಶಾಶ್ವತವಲ್ಲ 5 ವರ್ಷಗಳಲ್ಲಿ ಮುಗಿದು ಹೋಗುತ್ತದೆ ಆದರೆ ಅಧಿಕಾರಿಗಳು 60 ವರ್ಷದವರೆಗೆ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬಹುದು ಇಂಥಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸೇವೆ ಮಾಡುವ ಮನೋಭಾವ ಬೆಳೆಸಿಕೊಂಡು ತಾವು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಜನಹಿತ ಜನಪರ ಕೆಲಸ ಮಾಡಿದರೆ ತಾವು ಮಾಡಿರುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಜನರು ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿರುತ್ತಾರೆ. ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಡವರಿಗೆ ಮಧ್ಯಮ ವರ್ಗದವರಿಗೆ ತಮ್ಮ ಕೈಯಲ್ಲಾಗುವ ಸೇವೆ ಮಾಡಿ ಎಂದರು.

ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಗ್ರಾಮ ಪಂಚಾಯತಿಗೆ ಮುಗ್ಧ ಜನರು ಬರುತ್ತಾರೆ ಮನೆ ಕೊಡಿ, ಜಾಗ ಕೊಡಿ ವಿಧ-ವಿಧವಾದ ಬೇಡಿಕೆಗಳನ್ನು ಇಟ್ಟುಕೊಂಡು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ತಮಗೆ ಸಾಧ್ಯವಾದಷ್ಟು ಅವರಿಗೆ ದಾರಿ ದೀಪವಾಗಿ ಸೇವೆ ಮಾಡಿ ಎಲ್ಲ ಕೆಲಸಗಳನ್ನು ಸರ್ಕಾರದ ಆದೇಶ ಪಾಲನೆ ಮಾಡಿದರೆ ಸಾಧ್ಯವಾಗುವುದಿಲ್ಲ. ಕೆಲವು ಕೆಲಸವನ್ನು ನಿಮ್ಮ ಕೈಯಲ್ಲಿ ಆಗುವಂಥಹ ಕೆಲಸ ಮಾಡಿಕೊಟ್ಟರೆ ಅವರು ಇರುವ ತನಕ ನಿಮ್ಮನ್ನು ನೆನಪಿಸಿಕೊಂಡು ಜೀವನ ಸಾಗಿಸುತ್ತಾರೆ. ತಮ್ಮ ಕೈಯಲ್ಲಾಗುವ ಕೆಲಸವನ್ನು ಮಾಡಿಕೊಡಲು ಮುಂದಾಗಿ ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಲಾ ಶ್ರೀನಿವಾಸ, ಲಕ್ಷ್ಮಿದೇವಮ್ಮ ಚನ್ನಬಸವ, ಧರ್ಮಪ್ಪ, ಜ್ಯೋತಿ ನಾಗರಾಜ್, ನಾಗರಾಜ್ ಗೋರಗೋಡು, ಪೂರ್ಣಿಮ, ಶಾಂತ ಸಿಬ್ಬಂದಿಯಾದ ನಾಗರತ್ನ, ಚಂದ್ರ, ಮಹೇಶ, ಭಾವನಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment