ವಿಪರೀತ ಸೊಳ್ಳೆ ಕಾಟ ; ತೆಂಗಿನಕಾಯಿ ಸಿಪ್ಪೆ ತೆರವಿಗೆ ಆಗ್ರಹ

Written by Mahesha Hindlemane

Published on:

ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ದುರ್ಗಾಂಬ ದೇವಸ್ಥಾನಕ್ಕೆ ಸಮೀಪವಿರುವ ಒಟ್ಟೂರ ಕೆರೆ ಏರಿ ಮೇಲೆ ಸಾವಿರಾರು ತೆಂಗಿನಕಾಯಿ ಚಿಪ್ಪು ಹರಡಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. 

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇದರಿಂದ ಸೊಳ್ಳೆಕಾಟ ಹೆಚ್ಚುತ್ತಿದ್ದು ಮಲೇರಿಯಾದಂತ ಮಾರಣಾಂತಿಕ ರೋಗಗಳು ಹರಡುವ ಸಂಭವ ಹೆಚ್ಚಾಗಿದ್ದು ಜನತೆ ಆತಂಕದಿಂದ ದಿನ ದೂಡುವಂತಾಗಿದೆ.


ದುರ್ಗಾಷ್ಟಮಿ ಅಂಗವಾಗಿ ಚಂಡಿಕಾ ಹೋಮ

ಹೊಸನಗರ ; ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಶ್ರೀ ಚಾಮುಂಡೇಶ್ವರಿ ‌ದೇವಾಲಯದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಅಷ್ಟಮಿ ದಿನದಂದು ದೇವಸ್ಥಾನದ ‌ಆವರಣದಲ್ಲಿ ಸಕಲ ಭಕ್ತಾದಿಗಳ ಕ್ಷೇಮಾಭಿವೃದ್ಧಿಗಾಗಿ ಚಂಡಿಕಾ ಹೋಮ ಸಹಿತ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.

ಮಂಗಳವಾರ ಬೆಳಗಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಕುಟುಂಬ ಸಹಿತ ಭೇಟಿ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾದರು. ನಂತರ ಸೇರಿದ್ದ ಭಕ್ತ ವೃಂದಕ್ಕೆ ಅನ್ನಸಂತರ್ಪಣೆ ನಡೆಯಿತು.

ನಾಳೆ ಆಯುಧ ಪೂಜೆ ಪ್ರಯುಕ್ತ ವಾಹನ ಹಾಗೂ ಕೃಷಿ ಉಪಕರಣಗಳಿಗೆ ವಿಶೇಷ ಪೂಜೆ ಹಾಗು ಬುಧವಾರ ವಿಜಯ ದಶಮಿ ಅಂಗವಾಗಿ ಬನ್ನಿ ಮುಡಿಯುವ ಕಾರ್ಯ ನೆರವೇರಲಿದೆ ಎಂದು ದೇವಸ್ಥಾನದ ಕಾರ್ಯಕಾರಿ ಸಮಿತಿಯ ಮೂಲಗಳು ತಿಳಿಸಿವೆ.

ಕೂಡಲೇ ಪಟ್ಟಣ ಪಂಚಾಯತಿ ಆಡಳಿತ ವರ್ಗ ಸೂಕ್ತ ಕ್ರಮಕ್ಕೆ ಮುಂದಾಗಿ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಜನತ ಆಗ್ರಹಿಸಿದೆ.

Leave a Comment