ಹಾರೋಹಿತ್ತಲು ಮೂಲದ ಡಾ. ಸಂತೋಷ್ ಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಗೌರವ

Written by Mahesha Hindlemane

Published on:

ಶಿವಮೊಗ್ಗ ; ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ, ಪ್ರತಿಷ್ಠಿತ ‘ಡಾ. ಅಂಬೇಡ್ಕರ್ ಡಿಸ್ಟಿಂಗ್ವಿಶ್ ಸರ್ವೀಸ್ ನ್ಯಾಷನಲ್ ಅವಾರ್ಡ್-2025’ (Dr. Ambedkar Distinguished Service National Award-2025) ಅನ್ನು ಇಬ್ಬರು ಪ್ರತಿಭಾವಂತ ಪ್ರಾಧ್ಯಾಪಕರಾದ ಡಾ. ಸಂತೋಷ್ ಸಿ ಮತ್ತು ಡಾ. ಸೌಮ್ಯ ಶ್ಯಾಮಚಂದ್ ಅವರಿಗೆ ಪ್ರಕಟಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರ ಜಂಟಿ ಕೃತಿ “Tracing the Roots PVTGs in South India” ಮತ್ತು ಒಟ್ಟಾರೆ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು 2025ರ ಡಿಸೆಂಬರ್ 12 ರಂದು ನವದೆಹಲಿಯ ಪಂಚಶೀಲ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ‌‌.

ಈ ಗೌರವಕ್ಕೆ ಪಾತ್ರರಾಗಿರುವ ಡಾ. ಸಂತೋಷ್ ಸಿ ಅವರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ ಹಾರೋಹಿತ್ತಲು ಗ್ರಾಮದವರು. ಪ್ರಸ್ತುತ ಹಾವೇರಿ ಜಿಲ್ಲೆಯ ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 45ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 40ಕ್ಕೂ ಹೆಚ್ಚು ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭೇಟಿ ನೀಡಿದ್ದಾರೆ. ಅಲ್ಲದೆ, ಅವರು 2019ರ ಸೆಪ್ಟೆಂಬರ್‌ನಲ್ಲಿ ಮಲೇಷ್ಯಾದ ಮಲಯಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ “An Analysis of Drinking Water and Sustainable Development in Rural Area” ಸಂಶೋಧನಾ ಪ್ರಬಂಧವನ್ನು ಸಹ ಮಂಡಿಸಿದ್ದಾರೆ.

Leave a Comment