ಖ್ಯಾತ ಉದ್ಯಮಿ ಎಸ್ ಆರ್ ಪ್ರಭಾಕರ್ ನಿಧನ : ಗಣ್ಯರ ಸಂತಾಪ

Written by Mahesha Hindlemane

Published on:

ಹೊಸನಗರ ; ತಾಲೂಕಿನ ಹೆಸರಾಂತ ಉದ್ಯಮಿ, ಕೃಷಿಕ ಕೋಡೂರು ಸಮೀಪದ ಗೌಡಕೊಪ್ಪ ವಾಸಿ ಎಸ್.ಆರ್. ಪ್ರಭಾಕರ್ (86) ಶನಿವಾರ ಬೆಳಗ್ಗೆ 7:30ಕ್ಕೆ ನಿಧನರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮೃತರು, 90 ದಶಕದಲ್ಲಿ ತಾಲೂಕಿನ ಮೂಲಕ ಹಲವು ಶ್ರೀ ರಾಮಪ್ರಕಾಶ್ ಖಾಸಗಿ ಬಸ್‌ಗಳನ್ನು ಅಂತರ್ ಜಿಲ್ಲೆಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ಉದ್ಯಮದಲ್ಲಿ ಖ್ಯಾತಿ ಹೊಂದಿ, ಹಲವು ಕುಟುಂಬಗಳಿಗೆ ನೌಕರಿ ನೀಡುವ ಮೂಲಕ ಆಸರೆ ನೀಡಿದ್ದರು.

ಕಾಂಗ್ರೆಸ್ ಮುಖಂಡರಾಗಿದ್ದ ಮೃತರಿಗೆ ಪತ್ನಿ ಸಹಿತ ಅರಣ್ಯ ಗುತ್ತಿಗೆದಾರ ಎಸ್.ಪಿ.ಸುರೇಶ್ ಸೇರಿದಂತೆ ಮೂವರು ಪುತ್ರರಿದ್ದಾರೆ.

ಸಂತಾಪ :

ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ತಾಲೂಕು ಬ್ರಾಹ್ಮಣ ಮಹಾಸಭಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ..

Leave a Comment