ಡಾ. ಹೆಚ್. ಗಣಪತಿಯಪ್ಪ ನೇಗಿಲ ಯೋಗಿ ಪ್ರಶಸ್ತಿಗೆ ಭಾಜನರಾದ ಮಾಜಿ ಶಾಸಕ ಬಿ.ಸ್ವಾಮಿರಾವ್

Written by Mahesha Hindlemane

Published on:

ಹೊಸನಗರ ; ಉಳುವವನೇ ಹೊಲದೊಡೆಯ ಕಾಗೋಡು ರೈತ ಚಳುವಳಿ ನೆಡೆದು 75 ವಸಂತಗಳು ಸಂದ ಹಿನ್ನೆಲೆಯಲ್ಲಿ ಅಂದಿನ ಚಳುವಳಿಯ ನೇತಾರ ದಿವಂಗತ ಡಾ.ಹೆಚ್. ಗಣಪತಿಯಪ್ಪ ಅವರ ಸ್ಮರಣಾರ್ಥ ಸಾಗರದ ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ (ರಿ) ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮಹನೀಯರಿಗೆ ನಿರಂತರವಾಗಿ ನೀಡುತ್ತ ಬಂದಿರುವ ‘ಡಾ. ಹೆಚ್. ಗಣಪತಿಯಪ್ಪ ನೇಗಲ ಯೋಗಿ’ 2026ನೇ ಸಾಲಿನ ರಾಜ್ಯ ಮಟ್ಟದ ‘ಡಾ. ಹೆಚ್. ಗಣಪತಿಯಪ್ಪ ನೇಗಿಲ ಯೋಗಿ’ ಪ್ರಶಸ್ತಿಗೆ ಹೊಸನಗರ ತಾಲೂಕಿನ ಸೊನಲೆ ಗ್ರಾಮ ವಾಸಿ 95 ವಯೋಮಾನದ ರಾಜ್ಯದ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಶಾಸಕ ಬಿ.ಸ್ವಾಮಿರಾವ್ ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶೀಘ್ರದಲ್ಲೇ ಸಾಗರ ಪಟ್ಟಣದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಟ್ರಸ್ಟ್ ಹಸ್ತಾಂತರ ಮಾಡಲಿದೆ‌ ಎಂದು ಟ್ರಸ್ಟ್‌ನ ಮೂಲಗಳು ತಿಳಿಸಿದೆ.

Leave a Comment