ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿ ಸಾವು !

Written by Mahesha Hindlemane

Published on:

ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ ಡಾ. ಸಮೀಕ್ಷಾ ರೆಡ್ಡಿ ಅವರ ಕಾರಣವಾಗಿದ್ದ ನೀರಾನೆ ಹಂಸಿಣಿ ಇಂದು ಸಾವನ್ನಪ್ಪಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

12 ವರ್ಷದ ನೀರಾನೆ ಹಂಸಿಣಿ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮಾರ್ಚ್ 20 ನಡೆದಿದ್ದ ದುರಂತದಲ್ಲಿ ಡಾ ಸಮಿಕ್ಷಾ ರೆಡ್ಡಿ ಅವರು ಸಾವನ್ನಪ್ಪಿದ್ದರು. ಆ ಬಳಿಕ ಹಿಪ್ಪೋ ಗರ್ಭಪಾತ ಹಾಗೂ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿಣಿ ಉಳಿಸಿಕೊಳ್ಳಲು ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನೀರಾನೆ ಕೊನೆಯುಸಿರೆಳೆದಿದೆ.

ಶನಿವಾರದಂದು ಹಂಸಿಣಿ ಗರ್ಭದಲ್ಲೇ ಮರಿ ಮೃತಪಟ್ಟಿತ್ತು. ಆ ಬಳಿಕ ದೇಹದಾದ್ಯಂತ ವಿಷಕಾರಿ ಸೋಂಕು ಹರಡಿತ್ತು. ಬನ್ನೇರುಘಟ್ಟದ ವೈದ್ಯ ಡಾ. ಆನಂದ್‌ ಹಾಗೂ ಮೈಸೂರು ಮೂಲಕ ಮದನ್‌ ತಂಡ ಹಿಪ್ಪೋ ಉಳಿಸಲು ಪ್ರಯತ್ನಿಸಿದ್ದರು. ಆದರೆ ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಾಗಲೇ ಘಾಸಿಯಾಗಿದ್ದ ನೀರಾನೆ ಆ ಬಳಿಕ ಚೇತರಿಕೆ ಕಾಣಲೇ ಇಲ್ಲ. ನಿರಂತರ ಪ್ರಯತ್ನ ನಡುವೆಯೂ ನೀರಾನೆ ಸಾವನ್ನಪ್ಪಿದೆ.

Leave a Comment