ಧೀರ ದೀವರ ಸುಗ್ಗಿ ಹಬ್ಬ | ವಿಜಾಪುರದಲ್ಲಿ ಸಂಭ್ರಮದ 2ನೇ ವರ್ಷದ ವಾರ್ಷಿಕೋತ್ಸವ : ಗಣ್ಯರ ಸಮ್ಮುಖದಲ್ಲಿ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮ

Written by Mahesha Hindlemane

Updated on:

ಹೊಸನಗರ : ಧೀರ ದೀವರ ಸಂಘ (ರಿ.), ಬಟ್ಟೆಮಲ್ಲಪ್ಪ ಇವರ ವತಿಯಿಂದ ಆಯೋಜಿಸಿದ್ದ ಧೀರ ದೀವರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಧೀರ ದೀವರ ಸುಗ್ಗಿ ಹಬ್ಬ ಭಾನುವಾರ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಾಪುರದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮಪೂಜ್ಯ ಕಾರ್ತಿಕೇಯ ಪೀಠದ ಸಾರಗನಜೆಡ್ಡು ಅವಧೂತ ಯೋಗೇಂದ್ರಪ್ಪ ಸ್ವಾಮಿಜಿಗಳನ್ನು ಬೈಕ್ ರ‍್ಯಾಲಿಯೊಂದಿಗೆ ಪೂರ್ಣ ಕುಂಭ ಸ್ವಾಗತ ಮೂಲಕ ಸ್ವಾಮೀಜಿಗಳನ್ನು ಕರೆತರಲಾಯಿತು.

ಈ ಕಾರ್ಯಕ್ರಮದಲ್ಲಿ ದೀವರ ಸಮುದಾಯದ ಸಂಸ್ಕೃತಿ, ಜನಪದ ಕಲೆಗಳನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಭರತನಾಟ್ಯ ವೇಷಭೂಷಣದಲ್ಲಿ ಕಲಾವಿದೆ ಕು.ಮಾನ್ವಿತಾ ಹಿಲಗೋಡು ಅವರು ವೇದಿಕೆಯಲ್ಲಿ ಭರತ ನಾಟ್ಯ ವಿಶೇಷವಾಗಿತ್ತು.

ಸಭೆಯನ್ನು ಉದ್ದೇಶಿಸಿ ಶ್ರೀ ಸಿಗಂದೂರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಏಕತೆಯಿಂದ ನಮ್ಮ ದೀವರ ಸಮಾಜ ಒಂದಾಗಲು ಸದ್ಯ ನಾವೆಲ್ಲರೂ ಒಂದಬೇಕು 26 ಪಂಗಡಗಳು ಸೇರಿ ನಾವು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ ಎಂದರು.

ಈ ಸಮಾರೋಪದಲ್ಲಿ ದೀವರ ಸಮಾಜದ ಗಣ್ಯರನ್ನು ಹಾಗೂ ನಿವೃತ್ತ ಶಿಕ್ಷಕ ಬಿ.ಎಲ್ ಈಶ್ವರಪ್ಪ ಮತ್ತು ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ದೀವರ ಸಮಾಜದ ಮಕ್ಕಳನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ನೇಮಕ ಮಾಡಲಾಯಿತು. ನೂತನವಾಗಿ ಮಹೇಶ್ ಕಾಪಿ ಅವರನ್ನು ಅಧ್ಯಕರಾಗಿ ನೇಮಕ ಮಾಡಲಾಯಿತು.

ನಂತರ ಮಾತನಾಡಿದ ಅವಧೂತ ಕಾರ್ತಿಕೇಯ ಪೀಠದ ಸ್ವಾಮೀಜಿ ಯೋಗೇಂದ್ರಪ್ಪ, ನಾವೆಲ್ಲರೂ ದೀವರ ಸಮಾಜದವರು ನಮ್ಮ ಬಾಂಧವ್ಯ ಹಂಚಿಕೊಳ್ಳಲು ಸಾಧ್ಯ. ಸಮಾಜ ನನ್ನದು ಅಂತ ಇದ್ರೆ ಮಾತ್ರ ಕೊಡುಗೆ ಕೊಡಲು ಸಾದ್ಯ ಎಂದ ಅವರು ಸಮಾಜದ ಯುವಕರು ಬೆಳೆಯಬೇಕು ಎಂಬುದು ನನ್ನ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಕಾರ್ತಿಕೇಯ ಪೀಠದ ಅವಧೂತ ಯೋಗೇಂದ್ರಪ್ಪ ಸಾರಗನಜೆಡ್ಡು ಸ್ವಾಮೀಜಿ ಧೀರ ದೀವರ ಸಂಘದ ಅಧ್ಯಕ್ಷ ಮಹೇಶ್ ಕಾಪಿ, ನಿವೃತ ಸೈನಿಕ ಗಿರೀಶ್, ನಿವೃತ ಶಿಕ್ಷಕ ಈಶ್ವರಪ್ಪ, ನಿವೃತ ಉಪನ್ಯಾಸಕ ಕಾಪಿ ಗೋಪಾಲ, ಭರತನಾಟ್ಯ ಕಲಾವಿದೆ ಕುಮಾರಿ ಮಾನ್ವಿತಾ ಹಿಲಗೋಡು, ಹೈಕೋರ್ಟ್ ನ್ಯಾಯಧೀಶ ಕುಮಾರಸ್ವಾಮಿ, ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ತನುಜ್ ಕುಮಾರ್, ಸೋರೆಕೊಪ್ಪ

Leave a Comment