2026-27ನೇ ಸಾಲಿನ ನವೋದಯ 6ನೇ ತರಗತಿ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

Written by Mahesha Hindlemane

Published on:

JNVST 2026-27 Notification : ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ 6ನೇ ಕ್ಲಾಸ್‌ಗೆ ಪ್ರವೇಶ ನೀಡುವ ಸಂಬಂಧ, ಅರ್ಹತಾ ಪರೀಕ್ಷೆ ನಡೆಸಲು ಇದೀಗ ಅರ್ಜಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು.

WhatsApp Group Join Now
Telegram Group Join Now
Instagram Group Join Now

ಹೈಲೈಟ್ಸ್‌ :

📢 Stay Updated! Join our WhatsApp Channel Now →

ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ 6ನೇ ತರಗತಿಗೆ ಪ್ರವೇಶಾತಿ
ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.
ಆನ್‌ಲೈನ್‌ ಅರ್ಜಿಗೆ ಬೇಕಾದ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿ ತಿಳಿಸಲಾಗಿದೆ.

ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಗೆ ಸಂಬಂಧ ಇದೀಗ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಗುಣಮಟ್ಟಣದ ಶಿಕ್ಷಣ ಕೊಡಿಸಲು, ಆಧುನಿಕ ವ್ಯವಸ್ಥೆಯಲ್ಲಿ ಪರಿಸರ / ಅಡ್ವೆಂಚರ್ ಆಕ್ಟಿವಿಟಿಗಳು ಮತ್ತು ಉತ್ತಮ ದೈಹಿಕ ಶಿಕ್ಷಣದೊಂದಿಗೆ ಅಧ್ಯಯನ ಮಾಡಿಸಲು ಬಯಸಿದಲ್ಲಿ ಈ ಪರೀಕ್ಷೆಗೆ ತಮ್ಮ ಮಕ್ಕಳ ಪರವಾಗಿ ಈಗಲೇ ಅರ್ಜಿ ಸಲ್ಲಿಸಲು ಆರಂಭಿಸಿ. ಕೊನೆ ಕ್ಷಣದಲ್ಲಿ ಎದುರಾಗುವ ಸಮಸ್ಯೆಯಿಂದ ದೂರ ಉಳಿಯಿರಿ.

ದೇಶದಾದ್ಯಂತ ಒಟ್ಟು 665 ಜವಾಹರ ನವೋದಯ ವಿದ್ಯಾಲಯಗಳಿದ್ದು, ಕರ್ನಾಟಕದಲ್ಲಿ 33 ನವೋದಯ ವಿದ್ಯಾಲಯಗಳಿವೆ. ಜಿಲ್ಲೆಗೆ ಒಂದರಂತೆ ಜವಾಹರ ನವೋದಯ ವಿದ್ಯಾಲಯಗಳಿವೆ.

ಜವಾಹರ ನವೋದಯ ವಿದ್ಯಾಲಯ ಪ್ರವೇಶಾತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31-07-2026.
ಜವಾಹರ ನವೋದಯ ವಿದ್ಯಾಲಯ ಪ್ರವೇಶಾತಿ ಆಯ್ಕೆ ಪರೀಕ್ಷೆ : 28-11-2026

ಜೆಎನ್‌ವಿಎಸ್‌ಟಿ 2026 ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕುವ ವಿಧಾನ :

  • ಆಸಕ್ತ ವಿದ್ಯಾರ್ಥಿಗಳು / ಪೋಷಕರು ವೆಬ್‌ಸೈಟ್ https://cbseitms.rcil.gov.in/nvs/ ಗೆ ಭೇಟಿ ನೀಡಿ.
  • ತೆರೆದ ವೆಬ್‌ಪೇಜ್‌ನಲ್ಲಿ ‘Candidates Corner’ ಅಡಿಯಲ್ಲಿ ‘Click Here For Registration For Class VI JNVST (2026-27) ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.
  • ಆನ್‌ಲೈನ್‌ ಅರ್ಜಿಯ ಸರಳ ನಮೂನೆ ವೆಬ್‌ಪೇಜ್‌ ಓಪನ್‌ ಆಗುತ್ತದೆ.
  • ಇಲ್ಲಿ ಕೇಳಲಾಗುವ ಮಾಹಿತಿಗಳನ್ನು ಓದಿಕೊಂಡು ಆಯ್ಕೆ ಮಾಡಿ, ಹಾಗೂ ಟೈಪಿಸಬೇಕಾಗಿರುವುದನ್ನು ಸರಿಯಾಗಿ ನೀಡಿರಿ.
  • ಹೀಗೆ ಪೂರ್ಣ ಅರ್ಜಿ ಸಲ್ಲಿಸಿ, ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
  1. ಆನ್‌ಲೈನ್‌ ಅರ್ಜಿಗೆ ಈ ಕೆಳಗಿನ ದಾಖಲೆಗಳನ್ನು ಜೆಪಿಜಿ ಫಾರ್ಮ್ಯಾಟ್‌ನಲ್ಲಿ 10-100kb ಮೀರದಂತೆ ಸಿದ್ಧತೆ ಮಾಡಿಕೊಳ್ಳಬೇಕು.
  2. 5ನೇ ತರಗತಿ ಓದಿದ /ಓದುತ್ತಿರುವ ಶಾಲಾ ಹೆಡ್‌ಮಾಸ್ಟರ್‌ರಿಂದ ವಿದ್ಯಾರ್ಥಿ ವ್ಯಾಸಂಗ ಪ್ರಮಾಣ ಪತ್ರ.
  3. ವಿದ್ಯಾರ್ಥಿ ಭಾವಚಿತ್ರ
  4. ಪೋಷಕರ ಸಹಿ ಸ್ಕ್ಯಾನ್‌ ಕಾಪಿ
  5. ವಿದ್ಯಾರ್ಥಿ ಸಹಿ ಸ್ಕ್ಯಾನ್‌ ಕಾಪಿ
  6. ಆಧಾರ್ ಕಾರ್ಡ್‌ ಅಥವಾ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ

ಜೆಎನ್‌ವಿಎಸ್‌ಟಿ 6ನೇ ತರಗತಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇಕಡ.75 ರಷ್ಟು ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯ ಗ್ರಾಮೀಣ ಭಾಗದವರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದ ಶೇ. 25 ಸೀಟುಗಳನ್ನು ಮೆರಿಟ್‌ ಆಧಾರದಲ್ಲಿ ನಗರ/ ಗ್ರಾಮೀಣ ಭಾಗದವರಿಗೆ ಅವಕಾಶ ನೀಡಲಾಗುತ್ತದೆ.

ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ (JNVST) – ಹೊಸ ಪರೀಕ್ಷಾ ಮಾದರಿ

📝 ಒಟ್ಟು ಪ್ರಶ್ನೆಗಳು: 80
🎯 ಒಟ್ಟು ಅಂಕಗಳು: 100
⏰ ಪರೀಕ್ಷಾ ಅವಧಿ: 2 ಗಂಟೆಗಳು

ಹೊಸ ಪರೀಕ್ಷಾ ವಿಭಾಗಗಳು :

  • ಮಾನಸಿಕ ಸಾಮರ್ಥ್ಯ (Mental Ability): 20 ಪ್ರಶ್ನೆಗಳು – 25 ಅಂಕಗಳು
  • ಪರಿಸರ ಅಧ್ಯಯನ (EVS): 20 ಪ್ರಶ್ನೆಗಳು – 25 ಅಂಕಗಳು
  • ಗಣಿತ (Arithmetic): 20 ಪ್ರಶ್ನೆಗಳು – 25 ಅಂಕಗಳು
  • ಭಾಷೆ (Language): 20 ಪ್ರಶ್ನೆಗಳು – 25 ಅಂಕಗಳು

ಪ್ರಮುಖ ಬದಲಾವಣೆಗಳು :

✅ ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು 40ರಿಂದ 20ಕ್ಕೆ ಇಳಿಸಲಾಗಿದೆ.
✅ ಪರಿಸರ ಅಧ್ಯಯನ (EVS) ಹೊಸ ವಿಭಾಗವಾಗಿ ಸೇರಿಸಲಾಗಿದೆ.
✅ ಗಣಿತ ಮತ್ತು ಭಾಷಾ ವಿಭಾಗಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
✅ ಒಟ್ಟು ಪ್ರಶ್ನೆಗಳು ಮತ್ತು ಅಂಕಗಳು 80 ಪ್ರಶ್ನೆಗಳು – 100 ಅಂಕಗಳು ಎಂದಿನಂತೆಯೇ ಇರುತ್ತವೆ.

ಹೆಚ್ಚಿನ ಮಾಹಿತಿಗಾಗಿ ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯ್ಸ್ ಹುಂಚ (99804 63013) ವಾಟ್ಸಾಪ್ ಮೂಲಕ ಸಂಪರ್ಕಿಸಿ.

Leave a Comment