ಬೈಕ್ ಶೋ ರೂಂನಲ್ಲಿ ಕಾಣಿಸಿಕೊಂಡ ಬೆಂಕಿ, ಸುಟ್ಟು ಕರಕಲಾದ ವಾಹನಗಳು !

Written by Mahesha Hindlemane

Published on:

SHIVAMOGGA ; ಎನ್.ಟಿ. ರಸ್ತೆಯ ಬೈಕ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ವಾಹನ ಸುಟ್ಟು ಕರಕಲಾಗಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಗರದ ನ್ಯೂ ಮಂಡ್ಲಿ ಬೈಪಾಸ್ ರಸ್ತೆಯಲ್ಲಿರುವ ಹೀರೋ ಕಂಪನಿಯ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾದ ಕಾರ್ತಿಕ್ ಶೋರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮುಂಜಾನೆ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಿಯರ ಸಮಯ ಪ್ರಜ್ಞೆಯಿಂದ ಬಹುದೊಡ್ಡ ಅವಘಢ ತಪ್ಪಿದೆ.

ಬೆಂಕಿ ಅವಘಡದಲ್ಲಿ 4-5 ಬೈಕ್‌ಗಳು ಭಾಗಶಃ ಸುಟ್ಟು ಕರಕಲಾಗಿವೆ. ಕಚೇರಿ ಕೆಲ ಪೀಠೋಪಕರಣಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/malnadtimes/videos/1252377735883797/?mibextid=uSdriS

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ಹತೋಟಿಗೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಶೋರೂಮ್‌ಗೆ ಬೆಂಕಿ ಹತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ನಾಗರೀಕರು ಜಮಾವಣೆಗೊಂಡಿದ್ದರು. ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಮಾಜಿ ಉದ್ಯೋಗಿ ಪೊಲೀಸ್ ವಶಕ್ಕೆ :

ಈ ಘಟನೆ ಸಂಬಂಧ ಮಾಜಿ ಉದ್ಯೋಗಿಯೇ ಶೋ ರೂಂಗೆ ಬೆಂಕಿ ಹಚ್ಚಿದ್ದಾನೆಂದು ಆರೋಪಿಸಲಾಗಿದ್ದು, ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಆತನ ವಿಚಾರಣ ನಡೆಯುತ್ತಿದೆ.

Leave a Comment