6ನೇ ದಿನದ ಇಂದ್ರಧ್ವಜ ಮಹಾಮಂಡಲ ವಿಧಾನ | ಜಿನಾಲಯಗಳ ದರ್ಶನದಿಂದ ಆಧ್ಯಾತ್ಮಿಕ ಜೀವನ ಸಾರ್ಥಕ ; ಹೊಂಬುಜ ಶ್ರೀಗಳು

Written by malnadtimes.com

Published on:

RIPPONPETE ; ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಏರ್ಪಡಿಸಿದ ‘ಇಂದ್ರಧ್ವಜ ಮಹಾಮಂಡಲ ವಿಧಾನ’ ಆರನೇಯ ದಿನದ ಜಿನಾಲಯಗಳಿಗೆ ಧ್ವಜ ಆರೋಹಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ವಿಧಾನ ಪೂಜಾ ವಿಧಿಗಳು ಸೋಂದಾ ಶ್ರೀಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ, ಶ್ರವಣಬೆಳಗೊಳ ಶ್ರೀಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿರಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆರಂಭಗೊಂಡಿತು. ವಿವಿಧ ಜಿನಾಲಯಗಳಿಗೆ ಧ್ವಜ ಏರಿಸುವ ಮೂಲಕ ಆಧ್ಯಾತ್ಮಿಕ ಜೀವನ ಸಾರ್ಥಕವಾಗುವುದೆಂದು ಹೊಂಬುಜ ಶ್ರೀಗಳವರು ಪ್ರವಚನದಲ್ಲಿ ತಿಳಿಸಿದರು.

ಕನಕಗಿರಿ ಶ್ರೀಮಠದ ಜಗದ್ಗುರು ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರಕ್ಕೆ ಆಗಮಿಸಿ ಪೂಜಾ ವಿಧಿ ವಿಧಾನದಲ್ಲಿದ್ದ ಶ್ರಾವಕರನ್ನು ಹರಸಿದರು.

ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಪದ್ಮಶ್ರೀ ಮಾತಾಜಿಯವರ ನಿರ್ದೇಶನದಂತೆ ನಿರ್ವಹಿಸಿದರು.

ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ವಿಜಯಕುಮಾರ ಪಾಟೀಲ, ಕರ್ನಾಟಕ ಸರ್ಕಾರದ ಯೋಜನಾ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್, ಇಂದ್ರಧ್ವಜ ಮಹಾಮಂಡಲ ವಿಧಾನದ ಪೂಜೆಯಲ್ಲಿ ಪಾಲ್ಗೊಂಡರು.

ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್‌ರವರು ನಿತ್ಯ ಅಭಿಷೇಕದಲ್ಲಿ ಭಾಗಿಯಾದರು.

Leave a Comment