ಹೊಂಬುಜದಲ್ಲಿ ಇಂದ್ರಧ್ವಜ ಮಹಾಮಂಡಲ ವಿಧಾನ ಸಂಪನ್ನ | ಅತಿಶಯ ಪ್ರಭಾವನೆಯ ಆರಾಧನೆ ಸತ್‌ಪರಿಣಾಮವು ಸರ್ವರಿಗೂ ಸುಖ, ಆರೋಗ್ಯ ನೀಡುವುದು ; ಕಾರ್ಕಳ ಶ್ರೀಗಳು

Written by malnadtimes.com

Published on:

RIPPONPETE ; ಜೈನ ಧರ್ಮದ ಆಚರಣೆಯ ಅವಿಭಾಜ್ಯ ಅಂಗವಾಗಿ ಆರಾಧನೆ, ವಿಧಾನ ಪೂಜೆಗಳನ್ನು ಆಗಮೋಕ್ತ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಎಂಟು ದಿನಗಳ ಪರ್ಯಂತ ಇಂದ್ರಧ್ವಜ ಮಹಾಮಂಡಲ ಆರಾಧನೆಯಲ್ಲಿ ಶ್ರಾವಕ-ಶ್ರಾವಿಕೆಯರು ಭಕ್ತಿ ಶ್ರದ್ಧೆಗಳಿಂದ ಪಾಲ್ಗೊಂಡಿರುವುದು ಆಧ್ಯಾತ್ಮಿಕ ಪಥವನ್ನು ಭದ್ರಗೊಳಿಸಬಲ್ಲುದು ಎಂದು ಕಾರ್ಕಳ ಶ್ರೀ ಜೈನ ಮಠದ ಪರಮಪೂಜ್ಯ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಮ್ಮ ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಅತಿಶಯ ಪ್ರಭಾವನೆಯ ಆರಾಧನೆ-ವಿಧಾನದ ಸತ್‌ಪರಿಣಾಮವು ಸರ್ವರಿಗೂ ಸುಖ, ಆರೋಗ್ಯ ನೀಡುವುದು ಎಂದು ಆಶೀರ್ವದಿಸಿ ಹರಸಿದರು.

ಹೊಂಬುಜ ಶ್ರೀಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಭಟ್ಟಾರಕ ಪರಂಪರೆಯಲ್ಲಿ ಪ್ರಸಕ್ತ ಹಿರಿಯರಾಗಿರುವ ಕಾರ್ಕಳ ಸ್ವಸ್ತಿಶ್ರೀಗಳವರು ಶಾಸ್ತ್ರಧ್ಯಯನ, ಪೂಜಾ ವಿಧಿಗಳ ಬಗ್ಗೆ ನಿಖರವಾಗಿ ವಿವರಿಸುವವರು. ಅವರ ಜ್ಞಾನವು ಭಟ್ಟಾರಕರೆಲ್ಲರಿಗೂ ಲಭಿಸುತ್ತಿದೆ ಎಂದರು.

36 ವರ್ಷಗಳ ಧರ್ಮಶ್ರದ್ಧೆ ಹಾಗೂ ದೂರದರ್ಶಿತ್ವವನ್ನು ಅಭಿನಂದಿಸಿ “ಭಟ್ಟಾರಕ ಭೂಷಣ” ಉಪಾಧಿ ಅರ್ಪಿಸಿ, ಗೌರವಿಸಿದರು.

ಸೋಂದಾ ಶ್ರೀಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಗಳವರು ಸನ್ಮಾನ ಪತ್ರ ವಾಚಿಸಿದರು.

ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಪದ್ಮಶ್ರೀ ಮಾತಾಜಿಯವರು ಇಂದ್ರಧ್ವಜ ಆರಾಧನಾ ವಿಧಾನದಲ್ಲಿ ಉಪಸ್ಥಿತರಿದ್ದರು.

ಪ್ರಪ್ರಥಮವಾಗಿ ಏರ್ಪಡಿಸಿದ ಆರಾಧನಾ ವಿಧಾನದಲ್ಲಿ ಶ್ರಾವಕ-ಶ್ರಾವಕೆಯರು ವ್ರತಧಾರಿಗಳಾಗಿ ನಿಷ್ಠೆಯಿಂದ ಪಾಲ್ಗೊಂಡರು. ಜಯಮಾಲದೊಂದಿಗೆ ಸಂಪನ್ನಗೊಂಡಿತು. ಬಳಿಕ ರಜತ ರಥೋತ್ಸವ, ರಾತ್ರಿ ವಾರ್ಷಿಕ ಲಕ್ಷದೀಪೋತ್ಸವವು ಜರುಗಿತು. ಊರ ಪರವೂರ ಭಕ್ತರು ಶ್ರೀಕ್ಷೇತ್ರದ ದರ್ಶನ ಪಡೆದು, ವಿಧಾನದಲ್ಲಿ ಭಾಗಿಯಾದರು.

Leave a Comment