ಹೊಸನಗರ ; ಸತತ ಏಳು ವರ್ಷಗಳಿಂದ ಸ್ಕೀಮ್ ಉದ್ಯಮದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಯಾನ್ ಗ್ರೂಪ್ ಸಂಸ್ಥೆಯು ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ತನ್ನ ಹಲವು ಶಾಖೆಗಳನ್ನು ವಿಸ್ತರಿಸಿದ್ದು, ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಶಾಖಾ ಕಛೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಸ್ಥೆ ವತಿಯಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರತ್ಯೇಕವಾಗಿ ಸಂಸ್ಥೆಯ 4ನೇ ಆವೃತಿಯ ಸ್ಕೀಮ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ತನ್ನದೇ ಆದ ವೃತ್ತಿ ಜೀವನದಲ್ಲಿ ಛಾಪು ಮೂಡಿಸಿರುವಂತಹ ರಾಧಕೃಷ್ಣ ಪೂಜಾರಿ (ಪರಿಸರ ಪ್ರೇಮಿ), ಶುಶ್ರೂಷಕಿ ಶೈಲಜಾ. ಎಂ. ಟಿ (ಸರ್ಕಾರಿ ಆಸ್ಪತ್ರೆ) ಮತ್ತು ರಾಜ್ಯ ಪತ್ರಕರ್ತರ ಸಂಘದಿಂದ ಪಂಚಾಯತ್ ಯುವ ಐಕಾನ್ ಪ್ರಶಸ್ತಿ ಪುರಸ್ಕೃತ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಜಿ.ಎನ್. ಇವರನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿ ರಾವ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರ ಕುಮಾರ್, ಪಟ್ಟಣ ಪಂಚಾಯತಿ ಆಶ್ರಯ ಸಮಿತಿ ಸದಸ್ಯ ನಾಸಿರ್, ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಪ್ಪ, ಮಹೇಶ್ ಮಡೋಡಿ ಸೇರಿದಂತೆ ಅಯಾನ್ ಗ್ರೂಪ್‌ನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಅರಸಾಳಿನಲ್ಲಿ ಬೈಕ್ ಅಪಘಾತ ಯುವಕ ಸ್ಥಳದಲ್ಲೇ ಸಾವು !
ರಿಪ್ಪನ್‌ಪೇಟೆ ; ಇಲ್ಲಿಗೆ ಸಮೀಪದ ಅರಸಾಳು ಕೆರೆ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಆರಸಾಳಿನಲ್ಲಿ ನಡೆದಿದೆ.

ಮೃತ ಯುವಕ ಅರಸಾಳು ಗ್ರಾಮದ ಅನೂಪ್ (22) ಎಂದು ಗುರುತಿಸಲಾಗಿದೆ. ಅನೂಪ್ ಖಾಸಗಿ ರೆಪ್ ಮೆಡಿಕಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾರ್ಯನಿಮಿತ್ತ ರಿಪ್ಪನ್‌ಪೇಟೆಗೆ ಬಂದು ವಾಪಾಸ್ ಊರಿಗೆ ತೆರಳುತ್ತಿದ್ದಾಗ ಅರಸಾಳು ಕೆರೆ ಏರಿ ಮೇಲಿನ ಕಬ್ಬಿಣದ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.