ತೀರ್ಥಹಳ್ಳಿ : ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ಮುಂದುವರಿಸಬೇಕು, ನ್ಯಾಯ ಸಿಗಬೇಕು. ನಾವು ಯಾವ ದೇವಸ್ಥಾನದ ವಿರುದ್ಧವೂ ಅಲ್ಲ ಧರ್ಮದ ವಿರುದ್ಧವೂ ಅಲ್ಲ, ಎಲ್ಲಾ ಧರ್ಮದವರು ನಮ್ಮ ಮೇಲೆ ನಂಬಿಕೆ ಇರುವವರು ನಮ್ಮ ಜೊತೆ ಸೇರಿದ್ದಾರೆ, ಧರ್ಮಸ್ಥಳ ಎಂಬ ಊರಿನಲ್ಲಿ ಆಗಿರುವ ಅಸಹಜ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟಗಾರ, ನಟ ಅಹಿಂಸಾ ಚೇತನ್ ಹೇಳಿದರು.
ಪಟ್ಟಣದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅವರು ಇದು ಕೇವಲ ಒಂದು ಧರ್ಮದ ಅಥವಾ ಒಂದು ಸಿದ್ಧಾಂತದ ಹೋರಾಟ ಅಲ್ಲ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಎಸ್ ಐ ಟಿ ರವರು ಈ ತನಿಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು, ಬಿಜೆಪಿಯವರು ಹೋರಾಟ ಮಾಡಲಿ ಆದರೆ ಬಿಜೆಪಿಯವರು ಹೇಳಿದ ತಕ್ಷಣ ಯಾವುದು ಸತ್ಯ ಆಗುವುದಿಲ್ಲ ಎಂದರು..
ಬಿಜೆಪಿಯವರು ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ನಾಯಕತ್ವದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರಬಹುದು, ನೀವು ಪಾದಯಾತ್ರೆ ಯಾವುದು ಬೇಕಿದ್ದರೂ ಮಾಡಿ ಅದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ನ್ಯಾಯದ ಪರವಾಗಿ ಇದ್ದೀರಾ ಎಂಬುದು ಕಾಣುತ್ತಿಲ್ಲ.
ಬಿಜೆಪಿಗೆ ವೋಟ್ ಹಾಕಿರುವವರು, ಆರ್ ಎಸ್, ಎಸ್ ಪರವಾಗಿರುವವರು ನಮ್ಮ ಸಮಾಜದ ಜೊತೆಗೆ ಇದ್ದಾರೆ. ಮುಖ್ಯವಾಗಿ ಧರ್ಮಸ್ಥಳ ಊರಿನಲ್ಲಿ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಬೇಕಿದೆ. ಕರ್ನಾಟಕದಲ್ಲಿ ಒಕ್ಕೂರಲಾಗಿ ಈ ನ್ಯಾಯಕ್ಕಾಗಿ ಒಟ್ಟಾಗಿದ್ದಾರೆ ಎಂದರು..
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.