
ಮೆಗ್ಗಾನ್ ಆಸ್ಪತ್ರೆಯಲ್ಲಿ ಔಷಧಿ, ನೀರು, ಡಯಾಲಿಸಿಸ್ ಸಮಸ್ಯೆ ಪರಿಶೀಲಿಸಿದ ನಾಗಲಕ್ಷ್ಮಿ ಚೌಧರಿ
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಔಷಧಿ ಲಭ್ಯತೆ, ಡಯಾಲಿಸಿಸ್, ಕುಡಿಯುವ ನೀರು ಮತ್ತು ಸ್ವಚ್ಛತೆ ಕುರಿತು ರೋಗಿಗಳಿಂದ ನೇರವಾಗಿ ಮಾಹಿತಿ ಪಡೆದರು. ಹೊರಗಿನಿಂದ ಔಷಧಿ ತರಿಸುವ ಪರಿಸ್ಥಿತಿ ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.









