ಹಣಗೆರೆಕಟ್ಟೆಯಲ್ಲಿ ಭೀಕರ ಅಪಘಾತ : ಕಳಚಿ ಬಿತ್ತು ಬಸ್‌ನ ಹಿಂಬದಿಯ ನಾಲ್ಕು ಚಕ್ರಗಳು !

Written by Koushik G K

Updated on:

ತೀರ್ಥಹಳ್ಳಿ : ತಾಲೂಕಿನ ಹಣಗೆರೆಕಟ್ಟೆಯ ಕುಣಜೆ ಬಳಿ ಬಸ್ ಹಾಗೂ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್‌ನ ಹಿಂಬದಿಯ 4 ಚಕ್ರಕಳು ಬೇರ್ಪಟ್ಟಿದ್ದು ಕಾರಿನ ಮುಂಭಾಗ ಜಖಂ ಆಗಿದೆ.

WhatsApp Group Join Now
Telegram Group Join Now
Instagram Group Join Now

ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಡಿ.ಎಸ್. ವಿಶ್ವನಾಥ್ ಶೆಟ್ಟಿ ನೇಮಕ

📢 Stay Updated! Join our WhatsApp Channel Now →

ತೀರ್ಥಹಳ್ಳಿ:-2025-26ನೇ ಸಾಲಿನ  ತೀರ್ಥಹಳ್ಳಿಯ ಪ್ರತಿಷ್ಠಿತ ಶ್ರೀ ರಾಮೇಶ್ವರ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ 9 ಜನರನ್ನು ಸರ್ಕಾರದಿಂದ ಆಯ್ಕೆಯಾಗಿದ್ದು, ಈ ಸಮಿತಿಗೆ  ಅಧ್ಯಕ್ಷರಾಗಿ ಅವಿರೋಧವಾಗಿ  ಡಿ‌.ಎಸ್. ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ‌ ನೆಡೆದ ಪತ್ರಿಕಾಗೋಷ್ಠಿಯಲ್ಲಿ  ಶ್ರೀ ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ ನಾಲ್ಕು ವರ್ಷಗಳಿಂದ ಖಾಲಿಯಿದ್ದ ಸದಸ್ಯರುಗಳನ್ನು ಸರ್ಕಾರ ಮತ್ತು ಧಾರ್ಮಿಕ ದತ್ತಿ ಪರಿಷತ್ತು, ಜಿಲ್ಲಾಧಿಕಾರಿ ಗಳ ಮೂಲಕ ಆಯ್ಕೆ ಮಾಡಿದ್ದಾರೆ ಎಂದರು.

ನಮ್ಮ‌ಮೊದಲ ಆದ್ಯತೆ ದೇವಸ್ಥಾನದ ಪೌಳಿ ನಿರ್ಮಾಣವಾಗಿದೆ, ದೇವಸ್ಥಾನದ ಕೆಲಸಕ್ಕಾಗಿ ತಗ್ಗಿ ನಡೆಯಲು ಸಿದ್ದನಾಗಿದ್ದೇನೆ, ಹಾಗೇಯೇ ಮುಂದೆ ಬರುವ ದಸರಾವನ್ನು ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ನೇತೃತ್ವದಲ್ಲಿ ಸಭೆ ಕರೆದು ಅದ್ದೂರಿಯಾಗಿ ನಡೆಸಲು ತೀರ್ಮಾನ ಕೈಗೊಳ್ಳಲಿದ್ದೇವೆ, ಕ್ಷೇತ್ರದ ಜನರು ಸಹಕಾರ ನೀಡಬೇಕು ಎಂದರು. 

ಈ ಗೋಷ್ಠಿಯಲ್ಲಿ ಪ್ರಧಾನ ಅರ್ಚಕ ರಾಜಶೇಖರ್ ಭಟ್, ಸಮಿತಿಯ ಸದಸ್ಯರಾದ ಮಹಾಬಲರಾವ್, ಪ್ರದೀಪ್, ಪೂರ್ಣೇಶ್, ಹಾಲಿಗೆ ನಾಗರಾಜ್, ತ್ರಿವೇಣಿ ಸುರೇಶ್, ಜ್ಯೋತಿ  ರವಿ, ಶಶಿಧರ್, ಜಿಲ್ಲಾ ಧಾರ್ಮಿಕ ದತ್ತಿ ಪರಿಷತ್ ಸದಸ್ಯೆ ವರಲಕ್ಷ್ಮೀ, ನಾಗಭೂಷಣ ಉಪಸ್ಥಿತರಿದ್ದರು.

Leave a Comment