ಉಪನಿರ್ದೇಶಕರ ಅಧಿಕಾರ ದುರ್ಬಳಕೆ, ಕ್ರಮಕ್ಕೆ ಒತ್ತಾಯ

0 219

ಚಿಕ್ಕಮಗಳೂರು : ಉಪನಿರ್ದೇಶಕರ ಅಧಿಕಾರವನ್ನು ಕೆಲವು ಮಂದಿ ದುರ್ಬಳಕೆ ಮಾಡಿ ಕೊಂಡು ವಸೂಲಾತಿಯಲ್ಲಿ ತೊಡಗಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನ ಸಂಘ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.


ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಕಳೆದ ನವೆಂಬರ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಲೋಕಾಯುಕ್ತ ಬಲೆಗೆ ಬಿದ್ದು ಅಮಾನತ್ತಿನಲ್ಲಿದ್ದ ವೇಳೆಯಲ್ಲಿ ಇಲಾಖೆಯ ಕೆಲವರು ಖಾಸಗಿ ಶಾಲೆಗಳಿಗೆ ಮಂಜೂರಾತಿ ನವೀಕರಣಗೊಳಿಸಿ ಹಣ ವಸೂಲಾತಿ ಮಾಡಲಾಗಿದೆ ಎಂದರು.


2023-24ನೇ ಸಾಲಿನ ವರ್ಷಕ್ಕೆ ಪ್ರಥಮ ಮಾನ್ಯತೆ ಮತ್ತು ಮಾನ್ಯತಾ ನವೀಕರಣದ ವಿಷಯಗಳಿಗೆ ಸಂ ಬಂಧಿಸಿದಂತೆ ಉಪನಿರ್ದೇಶಕರ ಅಧಿಕಾರ ಮತ್ತು ಹೆಸರನ್ನು ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಕೆಲವು ಶಾಲೆಗಳ ಮೇಲಾಧಿಕಾರಿಗಳ ಗಮನಕ್ಕೆ ಬಾರದೇ ನವೀಕರಣ ಮಂಜೂರಾತಿಗೊಳಿಸಿ ಹಣ ವಸೂಲಾತಿ ಮಾಡ ಲಾಗಿದೆ ಎಂಬ ಅನುಮಾನವಿದೆ ಎಂದು ತಿಳಿಸಿದರು.


ಹೀಗಾಗಿ ಉಪನಿರ್ದೇಶಕರ ಹೆಸರು ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ, ಖಜಾಂಚಿ ಜಗದೀಶ್ ಕೋಟೆ ಹಾಜರಿದ್ದರು.

Leave A Reply

Your email address will not be published.

error: Content is protected !!