ಲಂಚ ಪಡೆಯುತ್ತಿದ್ದ ವೇಳೆ ಬಿಇಒ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ

0 412

ತರೀಕೆರೆ: ನಿವೃತ್ತ ಮುಖ್ಯ ಶಿಕ್ಷಕನಿಂದ ಲಂಚ (Bribe) ಪಡೆಯುತ್ತಿದ್ದ ವೇಳೆ ಬೀರೂರು ಬಿಇಒ (BEO) ಕಚೇರಿ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಲೋಕಾಯುಕ್ತ ಪೊಲೀಸರ (Lokayuktha Police) ಬಲೆಗೆ ಬಿದ್ದಿದ್ದಾನೆ.

ತರೀಕೆರೆ ತಾಲೂಕು ಹೊಸಗಂಗೂರು ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ, ಎನ್.ಪರಮೇಶ್ ತಮ್ಮ ನಿವೃತ್ತಿ ನಂತರ ಸರ್ಕಾರದಿಂದ ಬರಬೇಕಾದ ಜಿಪಿಎಫ್, ಜಿಐಎಸ್ ಪಡೆದುಕೊಳ್ಳಲು ಬಿಇಒ ಕಚೇರಿಗೆ ತೆರಳಿದ ವೇಳೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ.

ನೀವು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಉಳಿಸಿಕೊಂಡಿದ್ದೀರಿ ಅದರ ಬಾಕಿ ಇದೆ. ಅದನ್ನು ಸರಿ ಮಾಡಿಕೊಡುತ್ತೇನೆ. ಬಂದ ಹಣದಲ್ಲಿ ಅರ್ಧಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.

ದ್ವಿತಿಯ ದರ್ಜೆ ಸಹಾಯಕ ಚಂದ್ರಶೇಖರ ಮುಖ್ಯ ಶಿಕ್ಷಕನಿಂದ 40 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಚಂದ್ರಶೇಖರ್ ನನ್ನು ಬಂಧಿಸಿದ್ದಾರೆ.

Leave A Reply

Your email address will not be published.

error: Content is protected !!